ದಿನದ ಸುದ್ದಿ
ರಾಣೇಬೆನ್ನೂರು ನಗರದ ತಂದೆ-ಮಗ ಕಾಣೆ : ಪತ್ತೆಗೆ ಮನವಿ
ಸುದ್ದಿದಿನ,ಹಾವೇರಿ: ರಾಣೇಬೆನ್ನೂರ ವಾಗೀಶ ನಗರದ 35 ವರ್ಷದ ಸಿದ್ದಪ್ಪ ಜಟ್ಟೆಪ್ಪ ಸುತ್ತಕೋಟಿ ಹಾಗೂ 68 ವರ್ಷದ ಜಟ್ಟೆಪ್ಪ ಬಸವಣ್ಣೆಪ್ಪ ಸುತ್ತಕೋಟಿ ಇವರು ವ್ಯಾಪಾರದಲ್ಲಿ ಲುಕ್ಷಾನ್ ಆದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರಬರೆದಿಟ್ಟು ಮನೆಯಿಂದ ಹೋದವರು ಕಾಣೆಯಾಗಿವುರುದಾಗಿ ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಿದ್ದಪ್ಪ ಜಟ್ಟೆಪ್ಪ ಸುತ್ತಕೋಟಿ ಐದು ಫೂಟ್ ಎತ್ತರ, ಸದೃಢಮೈಕಟ್ಟಿ, ದುಂಡು ಮುಖ, ಗೋದಿಗೆಂಪು ಮೈಬಣ್ಣ, ಪಾದದ ಮೇಲೆ ಒಂದು ನಾರಲಿ ಇದೆ. ಜಟ್ಟೆಪ್ಪ ಬಸವಣ್ಣೆಪ್ಪ ಸುತ್ತಕೋಟಿ ಐದು ಫೂಟ್ ಐದು ಇಂಚು ಎತ್ತರ, ಸದೃಢಮೈಕಟ್ಟಿ, ದುಂಡು ಮುಖ, ಗೋದಿಗೆಂಪು ಮೈಬಣ್ಣ ಹಾಗೂ ಬಲಗಾಲ ಹಿಮ್ಮಡಿ ಹತ್ತಿರ ಒಂದು ಹಳೆಯ ಮಾದ ಗಾಯದ ಕಲೆ ಇದೆ.
ಈ ವ್ಯಕ್ತಿಗಳ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಅಥವಾ ರಾಣೇಬೆನ್ನೂರ ಶಹರ ಪೊಲೀಸ್ ಠಾಣೆ ದೂ.08375-266333, ಪಿಎಸ್‍ಐ ಮೊ.9480804550 ಹಾಗೂ ಸಿಪಿಐ ಮೊ.94808 04532ನ್ನು ಸಂಪರ್ಕಿಸಲು ರಾಣೇಬೆನ್ನೂರ ಶಹರ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243