ರಾಜಕೀಯ
ಸಚಿವ ರೇವಣ್ಣಗೆ ಸಂಸ್ಕಾರ ಕಮ್ಮಿ : ರಾಮುಲು ಟೀಕೆ
ಸುದ್ದಿದಿನ ಡೆಸ್ಕ್: ಸಚಿವ ರೇವಣ್ಣ ಅವರಲ್ಲಿ ಒಳ್ಳೆಯ ಸಂಸ್ಕಾರ ಇರಬೇಕಿತ್ತು. ಆದರೆ ಅವರಲ್ಲಿ ಅಧಿಕಾರದ ಅಹಂ ಹೆಚ್ಚಿದ್ದು, ಅದು ಬಹಳ ದಿನ ಉಳಿಯುವುದಿಲ್ಲ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಸಚಿವ ಎಚ್.ಡಿ.ರೇವಣ್ಣ ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದಿದ್ದ ವಿಚಾರದ ಕುರಿತು ಮಾತನಾಡಿದ ಶಾಸಕ ಬಿ.ಶ್ರೀರಾಮುಲು ಅವರು, ಸಚಿವ ರೇವಣ್ಣ ಅವರಲ್ಲಿ ಒಳ್ಳೆಯ ಸಂಸ್ಕಾರ ಇರಬೇಕಿತ್ತು. ಆದರೆ ನಮ್ಮದೇ ಸರ್ಕಾರ ಇದೆ, ನನಗೆ ಸಚಿವ ಸ್ಥಾನದ ಅಧಿಕಾರವೂ ಇದೆ ಎಂಬ ಅಹಂ ಅವರಲ್ಲಿದೆ. ಹಾಗಾಗಿ ಪ್ರಾಣಿಯಂತೆ ವರ್ತಿಸಿದ್ದಾರೆ. ಆದರೆ ಈ ಅಹಂಕಾರದ ಅಹಂ ಬಹಳ ದಿನ ಇರುವುದಿಲ್ಲ ಎಂದು ಎಚ್ಚರಿಸಿದ್ದಾರೆ
ಸಮ್ಮಿಶ್ರ ಸರ್ಕಾರ ಕೂಡ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುತ್ತಲೇ ಇದೆ ಎಂದು ದೂರಿದ್ದಾರೆ.