ರಾಜಕೀಯ

ಅಮಾಯಕಿ ಜತೆಗಿನ ನಿಮ್ಮ ವರ್ತನೆಯನ್ನು ಇಡೀ ರಾಜ್ಯ ನೊಡಿದೆ : ರೇಣುಕಾಚಾರ್ಯಗೆ ಶರವಣ ತಿರುಗೇಟು

Published

on

ಸುದ್ದಿದಿನ, ಬೆಂಗಳೂರು : ಒಬ್ಬ ಅಮಾಯಕಿ ಜತೆ ನೀವು ವರ್ತನೆ ಮಾಡಿದ ರೀತಿಯನ್ನು ಇಡೀ ರಾಜ್ಯ ನೋಡಿದೆ.ಆಕೆಗೆ ಮಾಡಿದ ಅನ್ಯಾಯವೂ ಗೊತ್ತು.ಇಂಥವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರಾ? ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗಿದೆ ಎಂದು ಜೆಡಿಎಸ್ ಕಚೇರಿಯಲ್ಲಿ ರೇಣುಕಾಚಾರ್ಯಗೆ ಶರವಣ ತಿರುಗೇಟು ನೀಡಿದ್ದಾರೆ.

ಸಿಎಂ ಬಗ್ಗೆ ಮಾತನಾಡುವ ನೈತಿಕತೆ ರೇಣುಕಾಚಾರ್ಯ ಅವರಿಗೆ ಏನಿದೆ? ನಿಮ್ಮ ರಾಜ್ಯಾಧ್ಯಕ್ಷರ ಸುತ್ತ ಇರುವ ಸಮಾಜ ಘಾತುಕ ಶಕ್ತಿಗಳು ಯಾರು‌ ಅಂತ ನಮಗೂ ಗೊತ್ತಿದೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದಾಗ ಇತರೆ ಮಂತ್ರಿಗಳೆಲ್ಲ ಜೈಲಿಗೆ ಅಲೆದದ್ದು ನಾವೂ ನೋಡಿದ್ದೇವೆ. ಸದನದಲ್ಲಿ ನೀಲಿ ಚಿತ್ರ ನೋಡಿದವರ ಪಕ್ಷದವರಿಂದ ಪಾಠ ಕಲಿಯಬೇಕೆ? ಎಂದು ಟಿ.ಎ.ಶರಬಣ ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version