ರಾಜಕೀಯ

ಪ್ರಧಾನಿ ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ 25 ಸಚಿವರು ಮತ್ತು ಅವರ ಖಾತೆಗಳು

Published

on

ಸುದ್ದಿದಿನ,ನವದೆಹಲಿ: ನಿನ್ನೆಯಷ್ಟೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ, ತಮ್ಮ ಟೀಂಗೆ ಜವಾಬ್ದಾರಿಯನ್ನ ಹಂಚಿಕೆ ಮಾಡಿದ್ದಾರೆ. ಮೋದಿಯನ್ನ ಸೇರಿ ಒಟ್ಟು 58 ಸಂಸದರು ನಿನ್ನೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದರು. ಇದರಲ್ಲಿ 25 ಸಂಸದರು ಕ್ಯಾಬಿನೆಟ್​ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅವರೆಲ್ಲರಿಗೂ ಖಾತೆಗಳನ್ನ ಹಂಚಿಕೆ ಮಾಡಲಾಗಿದೆ. ಅದರ ವಿವರ ಹೀಗಿದೆ.

ಕ್ಯಾಬಿನೆಟ್ ದರ್ಜೆಯ ಸಚಿವರು

  1. ನರೇಂದ್ರ ಮೋದಿ – ಪ್ರಧಾನ ಮಂತ್ರಿ
  2. ರಾಜನಾಥ್ ಸಿಂಗ್ – ರಕ್ಷಣಾ ಖಾತೆ
  3. ಅಮಿತ್ ಶಾ – ಗೃಹ ಖಾತೆ
  4. ಸುಬ್ರಮಣಿಯನ್ ಜಯ​ಶಂಕರ್​ – ವಿದೇಶಾಂಗ ವ್ಯವಹಾರಗಳ ಖಾತೆ
  5. ನಿರ್ಮಲಾ ಸೀತಾರಾಮನ್ – ಹಣಕಾಸು ಖಾತೆ
  6. ನಿತಿನ್ ಗಡ್ಕರಿ – ಸಾರಿಗೆ ಇಲಾಖೆ ಮತ್ತು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ
  7. ಸದಾನಂದಗೌಡ – ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
  8. ರಾಮ್ ವಿಲಾಸ್ ಪಾಸ್ವಾನ್ – ಗ್ರಾಹಕರ ವ್ಯವಹಾರ, ಆಹಾರ ಮತ್ತು ವಿತರಣಾ ಇಲಾಖೆ
  9. ನರೇಂದ್ರ ಸಿಂಗ್ ತೋಮರ್ -ಕೃಷಿ ಮತ್ತು ರೈತ ಕಲ್ಯಾಣ, ಗಾಮೀಣ ಅಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ
  10. ರವಿಶಂಕರ್ ಪ್ರಸಾದ್ – ಲಾ ಆ್ಯಂಡ್ ಜಸ್ಟಿಸ್, ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ
  11. ಹರ್ಸಿಮ್ರತ್ ಕೌರ್ – ಆಹಾರ ಮತ್ತು ಸಂಸ್ಕರಣೆ ಕೈಗಾರಿಕೆ ಇಲಾಖೆ
  12. ಥಾವರ್ ಚಂದ್ ಗೆಲ್ಹೋಟ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  13. ಡಾ. ರಮೇಶ್ ಪೋಖ್ರಿಯಾಲ್​ – ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ
  14. ಅರ್ಜುನ್ ಮುಂಡಾ – ಬುಡಕಟ್ಟು ಸಮುದಾಯದ ವ್ಯವಹಾರಗಳ ಖಾತೆ
  15. ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜವಳಿ ಖಾತೆ
  16. ಡಾ.ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಮತ್ತು ಭೂ-ವಿಜ್ಞಾನ ಖಾತೆ
  17. ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ ಮತ್ತು ಕ್ಲೈಮೇಟ್ ಚೇಂಜ್ ಖಾತೆ ಮತ್ತು ಮಾಹಿತಿ ಮತ್ತು ಪ್ರಸಾರ ಇಲಾಖೆ ಖಾತೆ
  18. ಪಿಯೂಷ್ ಗೋಯಲ್ – ರೈಲೇ ಇಲಾಖೆ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
  19. ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ ಹಾಗೂ ನ್ಯಾಚುರಲ್ ಗ್ಯಾಸ್ ಮತ್ತು ಮಿನಿಸ್ಟರಿ ಆಫ್ ಸ್ಟೀಲ್
  20. ಮುಕ್ತಾರ್ ಅಬ್ಬಾಸ್ ನಖ್ವಿ – ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
  21. ಪ್ರಹ್ಲಾದ್ ಜೋಶಿ – ಸಂಸದೀಯ ವ್ಯವಹಾರಗಳ ಖಾತೆ, ಕಲ್ಲಿದ್ದಲು ಮತ್ತು ಗಣಿಗಾರಿಕೆ
  22. ಮಹೇಂದ್ರನಾಥ್ ಪಾಂಡೆ – ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಖಾತೆ
  23. ಡಾ.ಅರವಿಂದ್ ಗಣಪತ್ ಸಾವಂತ್ – ಭಾರೀ ಇಂಡಸ್ಟ್ರಿ ಮತ್ತು ಸಾರ್ವಜನಿಕ ಉದ್ಯಮ ಇಲಾಖೆ
  24. ಗಿರಿರಾಜ್ ಸಿಂಗ್ -ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ
  25. ಗಜೇಂದ್ರ ಸಿಂಗ್ ಶೇಖಾವತ್ – ಜಲ ಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version