ಲೈಫ್ ಸ್ಟೈಲ್
ಜಗತ್ಪ್ರಸಿದ್ಧ ತಂದೂರ್ ಚಾಯ್‍ವಾಲಾನಿಗೆ ಮೋದಿಯೇ ಪ್ರೇರಣೆ
ಸುದ್ದಿದಿನ ಡೆಸ್ಕ್: ಓದಿದ್ದು, ಬಿಎಸ್ಸಿ ಆದರೆ ಈಗ ಒಬ್ಬ ಪ್ರಖ್ಯಾತ ಚಾಯ್ ವಾಲಾ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿಗೊಂಡ ಈ ಯುವಕ ಪುಣೆಯಲ್ಲಿ ತಂದೂರ್ ಚಾಯ್ ಅಂಗಡಿಯನ್ನು ತೆರೆದಿದ್ದಾನೆ.
ಇವನ ಹೆಸರು ಅಮೋಲ್ ದಿಲೀಪ್ ರಾಜ್‍ದೇವ್. ಚಹಾ ಮಾರಿ ಬದುಕುವ ತನ್ನ ಕುಟುಂಬವನ್ನು ನೋಡಿದ್ದ ಈತ, ಭವಿಷ್ಯದಲ್ಲಿ ತಾನು ಯಾವುದಾದರೂ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಬೇಕು ಎಂಬ ನಿರ್ಧಾರಕ್ಕೆ ಬಂದಿದ್ದ. ಆಗಲೇ ಅವನಿಗೆ ಹೊಳೆದದ್ದು ತಂದೂರ್ ಚಹಾ ಐಡಿಯಾ.
ಪುಣೆಯಲ್ಲಿರುವ ಈತನ ಅಂಗಡಿಯಲ್ಲಿ ವಿಭಿನ್ನವಾದ ಚಹಾವೊಂದು ಸಿಗುತ್ತದೆ. ಆ ಚಾಹಾದಲ್ಲಿ ಮಣ್ಣಿನ ಕಮಟು ವಾಸನೆ ಅಡಗಿದೆ. ಆ ಸುವಾಸನೆಗೆ ಮಾರು ಹೋಗಿರುವ ನೂರಾರು ಮಂದಿ ಕ್ಯೂನಲ್ಲಿ ನಿಂತು ಚಹಾ ಸೇವಿಸುತ್ತಿದ್ದಾರೆ.
ಅಮೋಲ್, ಈಗ ಚಹಾ ಮಾಡುತ್ತಿರುವುದು ಪುಟ್ಟ ಕುಡಿಕೆಯಲ್ಲಿ. ಜೇಡಿಮಣ್ಣಿನಲ್ಲಿ ಮಾಡಿರುವ ಈ ಕುಡಿಕೆಗಳನ್ನು ಒಂದು ಡ್ರಂನಲ್ಲಿ ಬಿಸಿ ಮಾಡಿ, ಅದಕ್ಕೆ ಟೀ ತುಂಬಿ ಮಣ್ಣಿನ ವಾಸನೆಯನ್ನು ಹಿಡಿಸಿ ನಂತರ ಮಾಮೂಲಿ ಕುಡಿಕೆಗಳಲ್ಲಿ ಹಾಕಿ ಜನರಿಗೆ ಕೊಡುತ್ತಿದ್ದಾನೆ. ಈತನ ಟೀ ಎಷ್ಟು ಫೇಮಸ್ಸಾಗಿದೆ ಎಂದರೆ ಇಡೀ ವಿಶ್ವವೇ ಅಮೋಲ್‍ನ ಟೀಯನ್ನು ಕೊಂಡಾಡುತ್ತಿದೆ. ಆದರೆ, ತನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಫೂರ್ತಿ ಎನ್ನುತ್ತಾನೆ ಅಮೋಲ್.