ದಿನದ ಸುದ್ದಿ
ಆನ್‌ಲೈನ್ ವಂಚನೆ ಬಗ್ಗೆ ಜಾಗೃತರಾಗಿರಿ; ಮನ್ ಕೀ ಬಾತ್ ಕರ್ನಾಟಕ ಸೈಬರ್ ಕ್ರೈಮ್ ವಂಚನ ಪ್ರಕರಣ ಉಲ್ಲೇಖಿಸಿ ಪ್ರಧಾನಿ
ಸುದ್ದಿದಿನಡೆಸ್ಕ್:‘ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಅನ್ನೋ ವ್ಯವಸ್ಥೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ತಮ್ಮ ಜನಪ್ರಿಯ ಮನ್ ಕಿ ಬಾತ್ ಬಾನುಲಿ ರ‍್ಯಕ್ರಮದಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎನ್ನುವುದು ಬರೀ ಸುಳ್ಳು. ಕ್ರಿಮಿನಲ್ ಗ್ಯಾಂಗ್‌ಗಳು, ವಂಚಕರು ಮಾಡುವ ಕೆಲಸವದು ಎಂದು ಹೇಳಿದರು.
ಆನ್ಲೈನ್ ಫ್ರಾಡ್ ಹೇಗಿರುತ್ತದೆ ಎನ್ನುವ ನರ‍್ಶನಗಳನ್ನೂ ದೇಶದ ಜನತೆಗೆ ಪ್ರಧಾನಿ ನೀಡಿದರು. ರ‍್ನಾಟಕ ಸೈಬರ್ ಕ್ರೈಮ್ ವಂಚನೆ ಪ್ರಕರಣ ಉಲ್ಲೇಖಿಸಿ ಮನದ ಮಾತಿನಲ್ಲಿ ಪ್ರಧಾನಿ ಜಾಗೃತಿ ಮೂಡಿಸಿದರು.
ಪೊಲೀಸ್, ಸಿಬಿಐ, ರ‍್ಕೋಟಿಕ್ಸ್, ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ನಿಮಗೂ ಫೋನ್ ಮಾಡಬಹುದು. ನಿಮ್ಮ ಮೇಲೆ ಕೇಸ್ ದಾಖಲಿಸಲಾಗುತ್ತದೆ ಇತ್ಯಾದಿ ಬೆದರಿಕೆ ಹಾಕಬಹುದು ಎಂದು ಅವರು ಉದಾಹರಣೆ ಸಮೇತ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಸೈಬರ್ ಕ್ರೈಮ್ ಹೆಲ್ಪ್ಲೈನ್ ನಂಬರ್ 1930 ಮತ್ತು cybercrime.gov.inವೆಬ್‌ಸೈಟ್‌ನಲ್ಲಿ ದೂರು ನೀಡುವಂತೆ ಹಾಗೂ #SaveDigitalIndia ಅನ್ನೋ ಹ್ಯಾಷ್‌ಟ್ಯಾಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜಾಗ್ರತೆ ಮೂಡಿಸಿ ಎಂದು ಪ್ರಧಾನಿ ಮನ್ ಕೀ ಬಾತ್‌ನಲ್ಲಿ ತಿಳಿಸಿದರು.
ದೇಶದಲ್ಲಿನ ಶಾಲೆಗಳು, ಮಕ್ಕಳ ಫಿಟ್ನೆಸ್ ಬಗ್ಗೆ ಈಗ ಮತ್ತಷ್ಟು ಹೆಚ್ಚಿನ ಗಮನ ನೀಡುತ್ತಿರುವುದನ್ನು ನೋಡಿ ಬಹಳ ಸಂತೋಷವಾಗುತ್ತಿದೆ. Fit India School Hours ಕೂಡಾ ಒಂದು ವಿಶಿಷ್ಟ ಉಪಕ್ರಮವಾಗಿದೆ.
ದೇಶದೆಲ್ಲೆಡೆ ಶಾಲೆಗಳಲ್ಲಿ ರ‍್ನಾಟಕದಲ್ಲಿ ಮನೆಮಾತಾಗಿರುವ ಖೋ ಖೋ ಕಬಡ್ಡಿಯಂತಹ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುತ್ತಿದೆ. ಇವುಗಳ ಪರಿಣಾಮ ಬಹಳ ಅದ್ಭುತವಾಗಿದೆ. ಹಾಜರಾತಿ ಪ್ರಮಾಣ ಉತ್ತಮವಾಗುವುದರ ಜೊತೆಗೆ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ದೇಶದ ಜನತೆಗೆ ಧನ್ ತೇರಸ್, ದೀಪಾವಳಿ, ಛಟ್ ಪೂಜಾ, ಗುರುನಾನಕ್ ಜಯಂತಿ ಶುಭಾಶಯಗಳನ್ನು ಪ್ರಧಾನಿ ತಿಳಿಸಿದ್ದಾರೆ.
ಎಲ್ಲರೂ ಬಹಳ ಸಂತೋಷ ಉಲ್ಲಾಸಗಳಿಂದ ಹಬ್ಬಗಳನ್ನು ಆಚರಿಸಿ. ವೋಕಲ್ ಫಾರ್ ಲೋಕಲ್ ಮಂತ್ರದೊಂದಿಗೆ ಹಬ್ಬಗಳ ಸರ‍್ಭದಲ್ಲಿ ಸ್ಥಳೀಯ ಅಂಗಡಿಗಳಿಂದ ಖರೀದಿಸಿದ ವಸ್ತುಗಳು ನಿಮ್ಮ ಮನೆಗಳಿಗೆ ಬರಲಿ ಎಂದು ಮನ್ ಕೀ ಬಾತ್ ನಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ, ಆತ್ಮರ‍್ಭರ್ ಭಾರತ್ ಅಭಿಯಾನ ಯಶಸ್ವಿಯಾಗಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಸ್ವಾವಲಂಬಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ ಎಂದ ಅವರು ವಿಶ್ವದಲ್ಲೇ ಅತಿ ಹೆಚ್ಚು ರಕ್ಷಣಾ ಸಾಧನಗಳನ್ನು ಖರೀದಿಸುವ ದೇಶವಾಗಿದ್ದ ಭಾರತ ಈಗ 85 ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು. ಏಷ್ಯಾದ ಅತಿದೊಡ್ಡ ’ಇಮೇಜಿಂಗ್ ಟೆಲಿಸ್ಕೋಪ್ ಒಂಅಇ’ ಅನ್ನು ಲಡಾಖ್‌ನ ಹಾನ್ಲೆಯಲ್ಲಿ ಉದ್ಘಾಟಿಸಲಾಗಿದ್ದು ಇದನ್ನು ಭಾರತದಲ್ಲೇ ತಯಾರಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243