ದಿನದ ಸುದ್ದಿ
ಇವು ಮಾಧ್ಯಮ ಅಲ್ಲ ‘ಮೋದಿನಾಮ’..!
- ಆಲ್ಮೆಡಾ ಗ್ಲಾಡ್ ಸನ್
Oxford ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹಾಗೂ ಫಾರ್ಮಾ ಕ್ಷೇತ್ರದ ದೈತ್ಯ AstraZeneca ಒಟ್ಟಾಗಿ ನಿರ್ಮಿಸಿರುವ ಕೋವಿಡ್ ಲಸಿಕೆ ಯಶಸ್ವಿಯಾಗಿ ಸ್ಟೇಜ್-2 ಮಾನವ ಪ್ರಯೋಗ ಮುಗಿಸಿ, ಕೊನೆಯ, ಅಂದರೆ ಸ್ಟೇಜ್-3 ಮಾನವ ಪ್ರಯೋಗಕ್ಕೆ ಅಣಿಯಾಗಿದೆ.
ಇದು ಸಂತಸದ ವಿಷಯವೋ, ಸಾಧನೆಯೋ, ಪೂರ್ಣ ಯಶಸ್ಸೋ ಅದು ಮುಂದಿನ ಪ್ರಶ್ನೆ. ಆದರೆ ಈ ಲಸಿಕೆಯ ಸುದ್ದಿ ಹೊರಬಿದ್ದಾಗಾಗಲಿ, ಈವಾಗ ಸ್ಟೇಜ್-2 ಮುಗಿಸಿದ ನಂತರವಾಗಲಿ, ಅದರ ಬಗ್ಗೆ ಮಾಧ್ಯಮಗಳು ವರದಿ ಮಾಡುವಾಗ ಎಲ್ಲೂ ಬ್ರಿಟನ್ನಿನ ಪ್ರಧಾನಿ ಬೋರಿಸ್ ಜಾನ್ಸನ್ ಬಗ್ಗೆ ಮಾತೇ ಇಲ್ಲ. ಲಸಿಕೆ ಪಕ್ಕದಲ್ಲಿ ಬೋರಿಸ್ ಜಾನ್ಸನ್ ಫೊಟೋ ಹಾಕಿ, ಪೂಜೆ ನಡೆಯುತ್ತಿಲ್ಲ.
ಕೊರೋನಾಕ್ಕೆ ಜಾನ್ಸನ್ ಮದ್ದು, ಕೋವಿಡ್‍ಗೆ ಜಾನ್ಸನ್ ಬಾಣ, ಕೊರೋನಾ ಷಡ್ಯಂತ್ರವನ್ನು ವಿಫಲಗೊಳಿಸಿದ ಜಾನ್ಸನ್, ಕೋವಿಡ್ ವಿರುದ್ಧ ಹೋರಾಟಕ್ಕೆ ವಿಶ್ವಕ್ಕೆ ಜಾನ್ಸನ್ನೇ ನಾಯಕ, ಜಾನ್ಸನ್ ಎದುರು ಮಂಡಿಯೂರಿದ ಕೋವಿಡ್, ಜಾನ್ಸನ್ ಹೊಡೆತಕ್ಕೆ ಹೈರಾಣಾದ ಕೊರೋನಾ ಎಂದೆಲ್ಲಾ ಶೀರ್ಷಿಕೆ ಕೊಟ್ಟು ಬ್ರಿಟನ್ನಿನ ಯಾವುದೇ ಮಾಧ್ಯಮ ವರದಿ ಮಾಡುತ್ತಿಲ್ಲ. ಲಸಿಕೆಯ ಅವಿಷ್ಕಾರ Oxford ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹಾಗೂ AstraZeneca ದಿಂದ ನಡೆದದ್ದು ಎಂದಷ್ಟೇ ವರದಿ ಮಾಡುತ್ತಿದ್ದಾರೆ.
ಅದೇ ನಮ್ಮಲ್ಲಾದರೇ? ಕಳೆದ ಎರಡ್ಮೂರು ತಿಂಗಳಿನಿಂದ ನಮ್ಮ ಟಿವಿ ಚಾನಲ್‍ಗಳಲ್ಲಿ ಲಸಿಕೆ, ಕೊರೋನಾಕ್ಕೆ ಜೌಷಧಿಯ ಹೆಸರು ಬಂದಾಗಲೆಲ್ಲಾ, ಅದರ ಸುದ್ದಿ ಹೇಗೆ ಹೊರಬಿದ್ದಿದೆ ನೋಡಿ. ಲಸಿಕೆ ಯಾರೇ ಕಂಡುಹಿಡಿಯಲಿ, ಫೊಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯದ್ದೇ. ಅದು ರಾಮ್‍ದೇವ್ ಆಗಲಿ, ಕಜೆಯಾಗಲಿ, ಕೊವಾಕ್ಸೀನ್ ಆಗಲಿ ಇನ್ಯಾವುದೇ ‘ಅವಿಷ್ಕಾರದ’ ಸುದ್ದಿಯಾಗಲಿ. ಮೊದಲು ಫೊಟೋ ಮೋದಿಯದ್ದು.
ನಂತರ ಮೂರು-ಮೂರು ಸಲ ರಿಪೀಟ್ ಆಗುವ, ರಣಭಯಂಕರ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ಜೊತೆಗೆ, ಆಂಕರ್ ಒಬ್ಬರು ಕೈಯಲ್ಲಿ ಮೋದಿ ಭಾವಚಿತ್ರ ಅಂಟಿಸಿದ ಸಿರಿಂಜ್ ಹಿಡಿದುಕೊಂಡು ಎಂಥಾ ಪ್ರೆಸೆಂಟೇಷನ್ …’ಕೊನೆಗೂ ಮೋದಿಯೆದುರು ಮೊಣಕಾಲೂರಿದ ವಿಶ್ವ’, ‘ಮೋದಿ ಬತ್ತಳಿಕೆಯಲ್ಲಿ ಕೋವಿಡ್ ಅಸ್ತ್ರ’ , ‘ಮೋದಿ ಮದ್ದಿಗೆ ಹೆದರು ಓಡಿದ ಕೊರೋನಾ’, ‘ಮೋದಿ ಹೊಡೆತಕ್ಕೆ ಹೈರಾಣಾದ ಕೋವಿಡ್, ‘ಮೋದಿ ಮುಂದೆ, ಕೊರೋನಾ ಹಿಂದೆ’, ‘ಕೊರೋನಾಕ್ಕೆ ಮೋದಿಯ ರಾಮಬಾಣ’, ‘ಮೋದಿ ಘರ್ಜನೆಗೆ ಸೋತು ಸುಣ್ಣವಾದ ಕೊರೋನಾ’,
ಅಬ್ಬಾಬ್ಬಾ! ಇನ್ನು ಅಭಿವೃದ್ಧಿ ಹಂತದಲ್ಲಿರುವ ನಮ್ಮ ಲಸಿಕೆಗಳಲ್ಲಿ ಯಾವುದಾದರೊಂದು ಕೊರೋನಾಕ್ಕೆ ಮದ್ದು ಎಂದು ಸಾಬೀತಾದರೆ ಈ ವರುಷದ Nobel Prize for Medicine ನಮ್ಮ ಪ್ರಧಾನಿ ಮೋದಿಯವರಿಗೇ ಕೊಡಬೇಕೆಂದು ನಮ್ಮ ಮಾಧ್ಯಮಗಳು ಶಿಫಾರಸ್ಸು ಮಾಡೋದಂತೂ ಗ್ಯಾರಂಟಿ.
ನಮ್ಮ ಮಾಧ್ಯಮಗಳು ತಲುಪಿರುವ ಮಟ್ಟ ಇದು. ಆಡಳಿತ ವರ್ಗ ಹಾಗೂ ಪಕ್ಷದ ಬೂಟು ನೆಕ್ಕುವುದರಲ್ಲಿ, ಅವರೆಸೆದ ಮೂಳೆ ಜಗಿಯುವುದರಲ್ಲಿ, ಅವರ ಪರವಾಗಿ ಓಲಗ, ಪುಂಗಿ ಊದುವುದರಲ್ಲಿ, ಅವರು ಅಂಡುತೊಳೆದ ನೀರಿನಲ್ಲಿ ಸ್ನಾನ ಮಾಡಲು ಸ್ಪರ್ಧಿಸುವುದರಲ್ಲಿ ನಮ್ಮ ಮಾಧ್ಯಮಗಳೆದುರು ಈ ಒರ್ಗ್ಯಾನಿಕ್ ಹೆಂಗ್ ಪುಂಗ್ ಲಿ, ಹೆಂಗ್ ಹಾರ್ಸ್ ಲಿ, ಹೆಂಗ್ ಮಾಡ್ ಲಿ, ಹೆಂಗ್ ಕಿರ್ಚ್ ಲಿ ಏನೇನೂ ಅಲ್ಲ. ಇವರನ್ನು ಬೆಳೆಸಿದ್ದೇ ನಮ್ಮ ಮಾಧ್ಯಮವೆಂಬ ತೊಡೆಗುನ್ನಿಗಳು. ಇವು ಮಾಧ್ಯಮ ಅಲ್ಲ ಮೋದಿನಾಮ…Media ಅಲ್ಲ Modia..!
ಕೃಪೆ : ಫೇಸ್ ಬುಕ್ ಬರಹ
ಸುದ್ದಿದಿನ.ಕಾಂ|ವಾಟ್ಸಾಪ್|9980346243