ದಿನದ ಸುದ್ದಿ

ರಾಷ್ಟ್ರಪತಿ ಲೋಕಸಭೆ ವಿಸರ್ಜನೆ : ಮೋದಿ ರಾಜೀನಾಮೆ

Published

on

ಸುದ್ದಿದಿನ ಡೆಸ್ಕ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 17 ನೇ ಲೋಕಸಭೆಯನ್ನು ಇಂದು ವಿಸರ್ಜಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಕೇಂದ್ರ ಸಚಿವ ಸಂಪುಟದ ಸಭೆ 17 ನೇ ಲೋಕಸಭೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಬೇಕೆಂದು ಸಲಹೆ ಮಾಡಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರಪತಿ ಭವನದಲ್ಲಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಂತ್ರಿ ಪರಿಷತ್ ಸಹಿತ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ಅವರು, ಹೊಸ ಸರ್ಕಾರ ರಚನೆವರೆಗೆ ಪ್ರಧಾನಮಂತ್ರಿ ಹಾಗೂ ಮಂತ್ರಿ ಪರಿಷತ್ ಸದಸ್ಯರು ಕಾರ್ಯ ಮುಂದುವರಿಸಬೇಕು ಎಂದು ಕೋರಿದ್ದಾರೆ.

ನರೇಂದ್ರ ಮೋದಿ ಅವರು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರನ್ನು ಕೂಡ ಭೇಟಿ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನಿರ್ಗಮಿಸುತ್ತಿರುವ ಸಚಿವ ಪರಿಷತ್‌ನ ಸದಸ್ಯರಿಗಾಗಿ ರಾಷ್ಟ್ರಪತಿ ಭವನದಲ್ಲಿ ಇಂದು ರಾತ್ರಿ ಬೀಳ್ಕೊಡುಗೆ ಔತಣಕೂಟ ಏರ್ಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version