ದಿನದ ಸುದ್ದಿ
ಪಕ್ಷದ ಅಡಿಪಾಯಕ್ಕೆ ಇಟ್ಟಿಗೆ ಜೋಡಿಸಿದವರು ಅಟಲ್ ಜಿ: ಮೋದಿ ವಿಷಾದ
ಸುದ್ದಿದಿನ ಡೆಸ್ಕ್ | ಅಟಲ್ ಬಿಹಾರ ವಾಜಪೇಯಿ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದು, ಬಿಜೆಪಿಯು ತಳಮಟ್ಟದಿಂದ ಬೆಳೆಯಲು ಇಟ್ಟಿಗೆಗಳನ್ನು ಜೋಡಿಸಿದವರು ವಾಜಪೇಯಿ ಅವರು ಎಂದು ಹಾಡಿ ಹೊಗಳಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಿಂದ ಆರು ಬಾರಿ ಟ್ವೀಟ್ ಮಾಡಿರುವ ಪ್ರಧಾನಿ ಅವರು, ತಮ್ಮ ರಾಜಕೀಯ ಬೆಳವಣಿಗೆಗೆ ವಾಜಪೇಯಿ ಅವರೇ ಕಾರಣ ಎಂದು ತಿಳಿಸಿದ್ದಾರೆ.
ವಾಜಪೇಯಿ ಅವರು ದೇಶಾದ್ಯಂತ ಸುತ್ತಾಡಿ ಪಕ್ಷವನ್ನು ತಳ ಮಟ್ಟದಿಂದ ಬೆಳೆಸದಿದ್ದರೆ, ಬಿಜೆಪಿಯು ಇಷ್ಟು ದೊಡ್ಡ ಪಕ್ಷವಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತಿರಲಿಲ್ಲ. ಅವರು ನನ್ನಂಥ ಲಕ್ಷಾಂತರ ಕಾರ‌್ಯಕರ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.
ಅವರು ಬಿಟ್ಟು ಹೋಗಿರುವ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಅಟಲ್ ಬಿಹಾರಿ ಅವರೊಂದಿಗೆ ಖಾಸಗಿ ಒಡನಾಟ ಹೊಂದಿದ್ದ ನನಗೆ ಅವರೊಟ್ಟಿಗೆ ಪ್ರಚಾರ ಯಾತ್ರೆಗಳಲ್ಲಿ ಪಾಲ್ಗೊಂಡ ಅನುಭವವಿದೆ. ಟಲ್ ಜಿ ಅವರ ಸಾವು ನನಗೆ ಮಾನಸಿಕವಾಗಿ ಕುಗ್ಗಿಸಿದೆ ಎಂದೂ ತಿಳಿಸಿದ್ದಾರೆ.
ಅಟಲ್ ಜಿ ಅವರು ಉತ್ತಮ ವಾಗ್ಮಿ ಹಾಗೂ ಚಿಂತಕರು. ಅವರನ್ನು ಮಾತಿನಿಂದ ಕಟ್ಟುಹಾಕಲು ಸಾಧ್ಯವಿಲ್ಲ. ಅಂತ ಮಹಾನ್ ವ್ಯಕ್ತಿಯ ಸಾವು ನಮಗೆ ತುಂಬಲಾರದ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401