ರಾಜಕೀಯ
‘ಪ್ರಜಾಪ್ರಭುತ್ವ ವಿರೋಧಿ’ ಮೋದಿ ಸರ್ಕಾರ : ಖರ್ಗೆ ಕಿಡಿ
ಸುದ್ದಿದಿನ, ಹುಬ್ಬಳ್ಳಿ : ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದ್ದು,ಜಿಡಿಪಿ ರೇಟ್ 8.2 ಇದೆ ಅಂತ ಕೇಂದ್ರ ಕೊಚ್ಚಿಕೊಳ್ಳುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ನ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅವರದ್ದೇ ಸರ್ವೆಯಲ್ಲಿ ಅದು 7.2ಅಂತ ದಾಖಲಾಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರಲಿಲ್ಲ. ಈಗ ಡೀಸೆಲ್ ಬೆಲೆಯೇ 70ರ ಗಡಿ ದಾಟಿದೆ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ತಪ್ಪು ಆರ್ಥಿಕ ನೀತಿಯಿಂದ ಕೇಂದ್ರ ಮನ ಬಂದಂತ ಹಣ ವ್ಯಯಿಸುತ್ತಿದೆ.
ಉದ್ಯೋಗ ಸೃಷ್ಟಿ ಯಲ್ಲಿ ಕೇಂದ್ರ ವಿಫಲ
ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಕೇಂದ್ರ ವಿಫಲವಾಗಿದೆ. 2ಕೋಟಿ ನಿರುದ್ಯೋಗಿಗಳಿಗೆ ನೌಕರಿ ಕೊಡುವ ಭರವಸೆ ಹುಸಿಯಾಗಿದೆ.
ಆರ್ಥಿಕವಾಗಿ, ಸಾಮಾಜಿಕವಾಗಿ ಮೋದಿ ಸರ್ಕಾರ ದೇಶ ಹಾಳು ಮಾಡುತ್ತಿದೆ.ಸಂವಿಧಾನ, ಪ್ರಜಾ ಪ್ರಭುತ್ವಕ್ಕೆ ಕೇಂದ್ರ ಬೆಲೆಯೇ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401