ರಾಜಕೀಯ
ಸಂಸತ್ ಘನತೆಗೆ ಚ್ಯುತಿ ತಂದ ಮೋದಿ ಮಾತು
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಭಾಷಣ ಮಾಡುವಾಗ ಆಡಿದ ಕೆಲವು ಮಾತುಗಳು ಸಂಸತ್ ಘನತೆಗೆ ಚ್ಯುತಿ ತಂದಿವೆ ಎಂದು ಆರೋಪಿಸಿರುವ ಕಾಂಗ್ರೆಸ್, ಆ ಪದಗಳನ್ನು ಕಡತದಿಂದ ತೆಗೆಸಿವೆ.
ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ್ ನಾರಾಯಣ ಅವರು ಆಯ್ಕೆಯಾದಾಗ ಪ್ರಧಾನಿ ಅವರು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದ ಬಿ.ಕೆ. ಹರಿಪ್ರಸಾದ್ ಅವರ ವಿರುದ್ಧ ಕೆಲವು ಮಾತನಾಡಿದ್ದರು. ಇವು ಸಂಸತ್ ಘನತೆಗೆ ಚ್ಯುತಿ ತರುತ್ತವೆ ಎಂದು ಆರೋಪಿಸಿದ್ದ ವಿಪಕ್ಷಗಳು, ಆ ಪದಗಳನ್ನು ಕಡತದಿಂದ ತೆಗೆಸಿದವು.
ಪ್ರಧಾನಿಯೊಬ್ಬರು ಸಂಸತ್ ನಲ್ಲಿ ಆಡಿದ ಮಾತುಗಳನ್ನು ಕಡತದಿಂದ ತೆಗೆಸಿಹಾಕಿರುವುದು ಇದೇ ಮೊದಲು.
ಸುದ್ದಿದಿನ.ಕಾಂ|ವಾಟ್ಸಾಪ್|9986715401