ದಿನದ ಸುದ್ದಿ

ಕೆಣಕಿದರೆ ನಡ ಮುರಿತೀವಿ: ಪಾಕ್‍ಗೆ ಮೋದಿ ಖಡಕ್ ವಾರ್ನಿಂಗ್

Published

on

ಸುದ್ದಿದಿನ ಡೆಸ್ಕ್: ಪಾಕಿಸ್ತಾದಲ್ಲಿ ಹೊಸದಾಗಿ ಜಾರಿಗೆ ಬಂದಿರುವ ಇಮ್ರಾನ್ ಖಾನ್ ನೇತೃತ್ವದ ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಕ್ಕೆ ಸೇರಿದ ಹೆಲಿಕಾಪ್ಟರ್ ಗುಂಡಿನ ದಾಳಿ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮರಳಿದ ಘಟನೆ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ಕದನ ವಿರಾಮ ಉಲ್ಲಂಘಿಸಿದರೆ ನಾವು ಸುಮ್ಮನಿರುವುದಿಲ್ಲ. ಕಾಲು ಕರೆದುಕೊಂಡು ಬಂದರೆ ದಿಟ್ಟ ಉತ್ತರ ಕೊಡುತ್ತೇವೆ ಎಂದು ಮನ್ ಕಿ ಬಾತ್‍ನಲ್ಲಿ ತಿಳಿಸಿದರು.

ನಾವು ಶಾಂತಿ ಪ್ರಿಯರು. ಭಾರತ ಪಾಕ್ ಗಡಿಯಲ್ಲಿ ಶಾಂತಿ ನೆಲೆಸಬೇಕೆಂಬುದು ನಮ್ಮ ಉದ್ದೇಶ. ಅದನ್ನು ಕದಡುವ ಪ್ರಯತ್ನ ಮಾಡಿದರೆ ನಮ್ಮ ಯೋಧರು ಸುಮ್ಮನಿರುವುದಿಲ್ಲ. ಖಂಡಿತವಾಗಿಯೂ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version