ದಿನದ ಸುದ್ದಿ

ಹವಾಮಾನ ವರದಿ

Published

on

ಸುದ್ದಿದಿನ ಡೆಸ್ಕ್ : ನಾಳೆಯಿಂದ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಬಿಸಿಗಾಳಿ ತೀವ್ರತೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಈ ಭಾಗದಲ್ಲಿ ತಾಪಮಾನ ಮೂರರಿಂದ ಐದು ಡಿಗ್ರಿಗಳಷ್ಟು ಕಡಿಮೆಯಾಗಲು ಆರಂಭಿಸಿದೆ ಎಂದು ಇಲಾಖೆ ತಿಳಿಸಿದೆ. ಆಕಾಶವಾಣಿಯೊಂದಿಗೆ ಮಾತನಾಡಿದ ಹಿರಿಯ ವಿಜ್ಞಾನಿ ಆರ್.ಕೆ. ಜೆನಮಣಿ, ಇಂದಿನಿಂದ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಬಿಸಿಗಾಳಿ ಸ್ಥಿತಿ ಸುಧಾರಿಸಲಿದೆ ಎಂಬ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ. ಇಲಾಖೆ ಈ ಪ್ರದೇಶಕ್ಕೆ ತನ್ನ ಎಚ್ಚರಿಕೆಯನ್ನು ಕೆಂಪು, ಕಿತ್ತಳೆಯಿಂದ, ಹಳದಿಗೆ ಇಳಿಸಿದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version