ದಿನದ ಸುದ್ದಿ
ಮಂಡ್ಯ ಲೋಕಸಭಾ ಚುನಾವಣೆ: 9 ನಾಮಪತ್ರಗಳು ಸಲ್ಲಿಕೆ
ಸುದ್ದಿದಿನ,ಮಂಡ್ಯ: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾರ್ಚ್ 25 (ಸೋಮವಾರ) ರಂದು 9 ನಾಮಪತ್ರಗಳು ಸ್ವೀಕೃತವಾಗಿವೆ.
ಪಕ್ಷೇತರ ಅಭ್ಯರ್ಥಿಯಾಗಿ ವಿ.ವಿ.ಪ್ರೇಮಾಕುಮಾರ ಅವರು 1 ನಾಮಪತ್ರ, ಎಂ.ಎಲ್.ಶಶಿಕುಮಾರ್ ಅವರು 1 ನಾಮಪತ್ರ, ಲಿಂಗೇಗೌಡ ಎಸ್.ಹೆಚ್. ಅವರು 1 ನಾಮಪತ್ರ, ಸಿ.ಎಲ್. ಲಿಂಗೇಗೌಡ ಅವರು 1 ನಾಮಪತ್ರ, ಸತೀಶ್ ಕುಮಾರ್ ಟಿ.ಎನ್ ಅವರು 1 ನಾಮಪತ್ರ ಹಾಗೂ ಜಾತ್ಯಾತೀತ ಜನತಾ ದಳದ ಪಕ್ಷದಿಂದ ನಿಖಿಲ್ .ಕೆ ಅವರು 4 ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401