ದಿನದ ಸುದ್ದಿ
ಸ್ವಗತ : ಇದು ಸೂಳೆಕೆರೆ ಕೂಗು !
ಭಾಗ -1 : ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’
ನಾನು ಶಾಂತಿಸಾಗರ. ನನ್ನ ಸೂಳಕೆರೆ ಎಂತಲೂ ಕೆರೆಯುತ್ತಾರೆ. ಶತಮಾನಗಳ ಕಾಲ ಜೀವ ಕುಲದ ದಾಹ ನೀಗಿಸಿದ ನಾನು ಇಂದು ಕುಬ್ಜವಾಗಿದ್ದೇನೆ. ನನ್ನ ಸಂಕಟ ಅದುವಲ್ಲ. ಬದುಕಿನ ಭವಿಷ್ಯ ಅರಿಯದ ಮಾನವ ಯಾವುದೋ ಆಸೆಗೆ ಬಲಿಯಾಗಿ ಒತ್ತುವರಿ ಮಾಡಿದ್ದಾನೆ. ಜೀವ ಜಲ ನೀಡಿದ ನನ್ನ ರಕ್ಷಣೆ ಕುರಿತು ತೀರಾ ನಿರ್ಲಕ್ಷ್ಯ ವಹಿಸಿದ್ದಾನೆ. ಅದು ಆತನ ಅಜ್ಞಾನ ಎಂದು ನಾನು ಕ್ಷಮಿಸಿ ಬಿಡುವ ಉದಾರತೆ ನನ್ನೊಳೆಗೆ ಇದೆ. ಆದರೆ ಭವಿಷ್ಯ ಆತನನ್ನು ಕ್ಷಮಿಸುವುದಿಲ್ಲ. ಹಲವು ದಾಳಿಯಿಂದ ಸೊರಗಿರುವ ನಾನು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದ್ದೇನೆ. ಆದರೆ ಅದರ ಪರಿವೇ ಇಲ್ಲದ ಮಾನವ ಮಾತ್ರ ತನ್ನ ಅಜ್ಞಾನ ಮುಂದುವರಿಸಿದ್ದಾನೆ. ಇದರಿಂದ ಕೇವಲ ಆತನಿಗಲ್ಲ, ಇಡೀ ಜೀವಕುಲ ಸಂಕಷ್ಟ ಅನುಭವಿಸುವ ದಿನಗಳು ಎದುರಾಗುತ್ತಿವೆ. ಇದು ನನ್ನನ್ನು ಅಕ್ಷರಶಃ ನೋವಿಸುತ್ತಿವೆ.
ನನ್ನ ಉದ್ದ – 8 ಕಿಲೋ ಮೀಟರ್ ಗಳಿಗೂ ಹೆಚ್ಚು, ನನ್ನ ಅಗಲ – ಸರಾಸರಿ 4 ಕಿಲೋ ಮೀಟರ್ . ಹಿಂದೆ ನನ್ನ ವಿಸ್ತಾರ 6650 ಎಕರೆ. ಇದು ನಾನು ಈ ಭೂಮಿ ಮೇಲೆ ಜನ್ಮ ತಾಳಿದಾಗ ಇದ್ದ ನನ್ನ ದೇಹದ ವಿಸ್ತಾರ. ಆದರೆ ಇಂದಿನ ವಿಸ್ತಾರ – 5000 ಎಕರೆ ಮಾತ್ರ. ಕೆಲವರ ಆಸೆಗೆ ಬಲಿಯಾದ ನಾನು ನನ್ನ ಹಲವು ಭಾಗ ಕಳೆದುಕೊಂಡಿದ್ದೇನೆ. ಮುಂದಿನ ಅಪಾಯ ಅರಿಯದೇ ಕೆಲವರು 1500 ಎಕರೆ ನನ್ನ ದೇಹವನ್ನು ಭಾಗ ಮಾಡಿದ್ದಾರೆ.
ಜೀವ ಕುಲಕ್ಕೆ ಬದುಕಲು ರಕ್ತದಂತೆ ನೀರು ಕೂಡ ಅಷ್ಟೇ ಮುಖ್ಯ. ಹಿಂದೆ ನಾನು 3 ರಿಂದ 4 ಅಡಿ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಇಂದು ಒಂದು ಟಿಎಂಸಿ ಅಡಿ ನೀರು ಸಂಗ್ರಹಿಸುವ ಕಸುವು ಹೊಂದಿದ್ದೇನೆ. ನನ್ನ ನಂಬಿ ಬದುಕುತ್ತಿರುವ ಅಸಂಖ್ಯಾತ ಜೀವಕುಲದ ದಾಹವನ್ನು ನಿರಂತರವಾಗಿ ನೀಗಿಸಬೇಕು ಎಂಬುದು ನನ್ನ ಆಸೆ. ಇದಕ್ಕೆ ಪ್ರಜ್ಞಾವಂತರಾದ ನಿಮ್ಮ ಸಹಕಾರ ಬೇಕು. ನಾನು ಪರಿ ಪರಿಯಾಗಿ ಬೇಡಿಕೊಳ್ಳುವೆ. ನನ್ನ ರಕ್ಷಣೆಗೆ ನೀನು ಧ್ವನಿ ಎತ್ತು ನಿನ್ನ ಕೊನೆಗಾಲದವರಿಗೂ ನಾನು ದಾಹ ನೀಗಿಸುತ್ತೇನೆ. ಅರಿತೋ, ಅರಿಯದೆಯೋ ನನ್ನ ಮೇಲೆ ಅಕ್ರಮಣ ಮಾಡಿದವರ ಅಜ್ಞಾನವನ್ನು ದೂರ ಮಾಡು. ಇಗೋ ಮಾನವ ನಾನು ಬದುಕಬೇಕು. ಏಕೆಂದರೆ ನನ್ನ ನಂಬಿ ಜೀವಕೋಟಿ ಇದೆ. ಅದಕ್ಕಾಗಿ….
ನನ್ನ ರಕ್ಷಣೆಯ ನಿರೀಕ್ಷೆಯಲ್ಲಿ
ಇಂತಿ
ಸೂಳಕೆರೆ (ಶಾಂತಿಸಾಗರ)
ಈ ನಿಟ್ಟಿನಲ್ಲಿ ‘ಸುದ್ದಿದಿನ.ಕಾಂ’ ಕೂಡಾ ‘ನಮ್ಮ ಸೂಳೆಕೆರೆ ಉಳಿಸಿ ಅಭಿಯಾನ’ವನ್ನು ಆರಂಭಿಸಿದೆ. ಇದಕ್ಕೆ ಯುವಸಮೂಹ, ಪರಿಸರ ಪ್ರೇಮಿಗಳು, ನಾಗರೀಕರು ಸೂಳೆಕೆರೆಯ ಬಗೆಗಿನ ಅನಿಸಿಕೆ, ಮಾಹಿತಿಯನ್ನು ಸುದ್ದಿದಿನದ | 9986715401 ಈ ವಾಟ್ಸಾಪ್ ನಂಬರ್ ಇಲ್ಲಿ ಹಂಚಿಕೊಳ್ಳಬಹುದು.
ಹಾಗೇ ‘ಖಡ್ಗ ಸ್ವಯಂ ಸೇವಕರ ಸಂಘ(ರಿ)- ಕರ್ನಾಟಕ’ ದ
ರಘು.ಬಿ.ಆರ್ ಹೊನ್ನೆಮರದಳ್ಳಿ|997241414251
ಕೆ.ಸಿ.ಬಸವರಾಜ್ ಬೆಳ್ಳೂಡಿ| 9606781310
ಬಿ. ಕುಬೇಂದ್ರ ಚನ್ನಗಿರಿ | 9900437357 ಗೆ
ಇವರನ್ನು ಸಂಪರ್ಕಿಸುವುದರ ಮೂಲಕ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆಯಬಹುದು.