ದಿನದ ಸುದ್ದಿ
ರಾಜ್ಯಾದ್ಯಂತ ಮುಂಗಾರು ಚುರುಕು ; ರೈತರು ಡಿ.ಎ.ಪಿ. ಬದಲಿಗೆ ಸಂಯುಕ್ತ ರಸಗೊಬ್ಬರ ಬಳಸಲು ಕೃಷಿ ಇಲಾಖೆ ಸೂಚನೆ
ಸುದ್ದಿದಿನಡೆಸ್ಕ್:ರಾಜ್ಯಾದ್ಯಂತ, ಮುಂಗಾರು ಕೃಷಿ ಚಟುವಟಿಕೆ ಗರಿಗೆದರಿದ್ದು, ಭೂಮಿ ಹದ ಮಾಡುವ ಕಾಯಕದಲ್ಲಿ, ರೈತರು ತೊಡಗಿದ್ದಾರೆ. ಕೃಷಿಕರು, ಡಿ.ಎ.ಪಿ. ರಸ ಗೊಬ್ಬರದ ಬದಲಿಗೆ, ಸಂಯುಕ್ತ ರಸಗೊಬ್ಬರ ಬಳಸುವಂತೆ, ಕೃಷಿ ಇಲಾಖೆ, ಮಾರ್ಗಸೂಚಿ ಹೊರಡಿಸಿದೆ. ಸಸ್ಯಗಳ ಬೆಳವಣಿಗೆಗೆ, 17 ಪೋಷಕಾಂಶಗಳ ಅಗತ್ಯವಿದೆ.
ಆ ಪೈಕಿ, ಗಾಳಿ ಮತ್ತು ನೀರಿನ ಮೂಲಕ, ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ದೊರೆಯುತ್ತದೆ. ಉಳಿದ 14 ಪೋಷಕಾಂಶಗಳಿಗೆ, ಸಂಯುಕ್ತ ರಸಗೊಬ್ಬರ ಬಳಸುವಂತೆ, ಸಲಹೆ ನೀಡಲಾಗಿದೆ. ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ, ಬಿತ್ತಿದ ಬೀಜ, ಮೊಳಕೆಯೊಡೆದ ಸಸಿಗಳಿಗೆ ಅವಶ್ಯವಿರುವ, ಪೊಟ್ಯಾಷ್ ಪೋಷಕಾಂಶ ಲಭ್ಯವಾಗಿ, ಸಸಿಗಳಲ್ಲಿ ಕಿಣ್ವಗಳನ್ನು ಸಕ್ರಿಯಗೊಳಿಸಿ, ನೀರು ಮತ್ತು ಪೋಷಕಾಂಶಗಳ ಸಾಗಣೆಗೆ ಸಹಾಯ, ಬರ ಪರಿಸ್ಥಿತಿಯಲ್ಲಿ ಜೀವದಾಯಿ, ಉತ್ಪಾದಕತೆ ಮತ್ತು ಗುಣಮಟ್ಟ ಸುಧಾರಿಸಲು ಸಹಕಾರಿ ಎಂದು, ಕೃಷಿ ಇಲಾಖೆ, ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243