ದಿನದ ಸುದ್ದಿ
ಹೃದ್ರೋಗದ ಮದ್ದು ಈ ‘ಹೆಸರು ಬೇಳೆಯ ಪಾನೀಯ’
ಹೆಸರು ಬೇಳೆ ಪಾನೀಯವು ದೇಹಕ್ಕೆ ತಂಪು, ಸುಲಭವಾಗಿ ಜೀರ್ಣವಾಗುತ್ತದೆ. ಕೂದಲಿನ ಆರೋಗ್ಯಕ್ಕೆ ಹೆಸರು ಕಾಳು ಮಹತ್ವದ್ದು. ಇದರಲ್ಲಿ ಅಮಿನೋ ಆ್ಯಸಿಡ್ ಹೇರಳವಾಗಿರುವುದರಿಂದಾಗಿ ಇದು ಹೃದ್ರೋಗಕ್ಕೆ ಒಳ್ಳೆಯ ಮದ್ದು. ಹಸಿರು ಬಣ್ಣದಲ್ಲಿ ಗುಂಡಗಿರುವ ಹೆಸರುಕಾಳಿನ ಸಿಪ್ಪೆ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೆಸರು ಕಾಳಿನಲ್ಲಿರುವ antioxidant ಚರ್ಮಕ್ಕೆ ಹೊಳಪು ನಿಡುವುದಲ್ಲದೆ ಇದರಲ್ಲಿರುವ ವಿಟಮಿನ್ ಸಿ ಚರ್ಮದ ಕೋಶವನ್ನು ರಕ್ಷಿಸುವ ಸಾಮರ್ಥ್ಯ ಹೊಂದಿರುವುದರಿಂದ ಮುಪ್ಪಾಗುದನ್ನು ನಿಧಾನಗೊಳಿಸುತ್ತದೆ.
ಬೇಕಾಗುವ ಸಾಮಗ್ರಿಗಳು
- ಒಂದು ಕಪ್ ಹೆಸಿರು ಬೇಳೆ
- ಮುಕ್ಕಾಲು ಕಪ್ ಬೆಲ್ಲಾ
ಮಾಡುವ ವಿಧಾನ
ದಪ್ಪ ತಳದ ಬಾಣಲೆಯಲ್ಲಿ ಹೆಸರು ಬೇಳೆಯನ್ನು ಸ್ವಲ್ಪ ಘಮ್ಮನೆ ಪರಿಮಳ ಬರುವ ವರೆಗೆ ಹುರಿಯಿರಿ. ಹುರಿದ ಬೇಳೆಯನ್ನು ಮೂರು ಬಾರಿ ಚೆನ್ನಾಗಿ ತೊಳೆದು ಮಿಕ್ಸಿಗೆ ಹಾಕಿ ಮೊದಲಿಗೆ ಕಾಲು ಕಪ್ ನೀರಿನೊಂದಿಗೆ ರುಬ್ಬಿಕೊಳ್ಳಿ. ಬೇಳೆ ಸರಿಯಾಗಿ ನುಣ್ಣಗೆ ಆಗಲು ಮತ್ತೊಂದಿಷ್ಟು ಕಾಲು ಕಪ್ ನೀರು ಸೇರಿಸಿ ರುಬ್ಬಿ. ಹಾಗೆ ನುಣ್ಣಗೆ ರುಬ್ಬಿದ ಪೇಸ್ಟ್ ನ್ನು ಮಿಕ್ಸರ್ ನಿಂದ ತೆಗೆದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲಾವನ್ನು ಸೇರಿಸಿ. ಅದಕ್ಕೆ ಕುಡಿಯುವ ಎರಡು ಲೋಟ ನೀರು ಸೇರಿಸಿ ಹದಿನೈದು ನಿಮಿಷ ಫ್ರೀಜ್ ನಲ್ಲಿ ಇಟ್ಟು ತೆಗೆದು ಕುಡಿದರೆ ಬೇಸಿಗೆಯ ದಣಿವು ಆಯಾಸವೆಲ್ಲಾ ಇಂಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243