ದಿನದ ಸುದ್ದಿ
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ, ತುಮಕೂರು : ಮೊರಾರ್ಜಿ ದೇಸಾಯಿ – ಅಟಲ್ ಬಿಹಾರಿ ವಾಜಪೇಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜುಗಳ ಪ್ರಥಮ ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಕಾಲೇಜುಗಳಿಗೆ 2024-25 ಸಾಲಿಗೆ ಮೊರಾರ್ಜಿ ದೇಸಾಯಿ/ಆಟಲ್ ಬಿಹಾರಿ ವಾಜಪೇಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜುಗಳಿಗೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಪಿಸಿಎಂಬಿ ಹಾಗೂ ಸಿಸಿಎಂಸಿ ಕೋರ್ಸ್ ಗಳಿಗೆ ದಿನಾಂಕ 15.05.2024 ರಿಂದ 23.05.2024 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.
ಮೊರಾರ್ಜಿ ದೇಸಾಯಿ/ಅಟಲ್ ಬಿಹಾರಿ ವಾಜಪೇಯಿ/ಡಾ.ಬಿ.ಆರ್ ಅಂಬೇಡ್ಕರ್/ಕಿತ್ತೂರು ಚೆನ್ನಮ್ಮ/ಇಂದಿರಾ ಗಾಂಧಿ ವಸತಿ ಶಾಲೆ/ಕಾಲೇಜುಗಳಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ನಂಬರ್, ಇತ್ತೀಚಿನ 2 ಭಾವಚಿತ್ರ (ಪಾಸ್‌ಪೋರ್ಟಿ ಅಳತೆಯ) ವಿಶೇಷ ವರ್ಗಕ್ಕೆ ಸೇರಿದವರಾಗಿದ್ದರೆ ಸಂಬಂಧಿಸಿದ ಪ್ರಮಾಣ ಪತ್ರ) ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆ/ಕಾಲೇಜುಗಳನ್ನು ಹಾಗೂ ಜಂಟಿ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ತುಮಕೂರು ಜಿಲ್ಲೆ ಅವರನ್ನು ಸಂಪರ್ಕಿಸಲು ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243