ದಿನದ ಸುದ್ದಿ

ಐದು ರಾಜ್ಯಗಳಿಂದ 180ಲಕ್ಷ ಟನ್ ಗೂ ಹೆಚ್ಚು ಗೋಧಿ ಸಂಗ್ರಹ

Published

on

ಸುದ್ದಿದಿನ ಡೆಸ್ಕ್ : 2022-23 ರ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ ಇದುವರೆಗೆ ಐದು ರಾಜ್ಯಗಳಿಂದ180 ಲಕ್ಷ ಟನ್ ಗೂ ಹೆಚ್ಚು ಗೋಧಿಯನ್ನು ಸಂಗ್ರಹಿಸಲಾಗಿದೆ.

ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಂದ ಈ ಸಂಗ್ರಹ ಮಾಡಲಾಗಿದೆ. 36ಸಾವಿರದ 412 ಕೋಟಿ ರೂಪಾಯಿಗಳ ಕನಿಷ್ಠ ಬೆಂಬಲ ಬೆಲೆ ಮೌಲ್ಯದ 19 ಲಕ್ಷ 99 ಸಾವಿರ ರೈತರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

2021-22ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ ಭತ್ತದ ಖರೀದಿಯು ಸುಸೂತ್ರವಾಗಿ ಸಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ದೇಶದಲ್ಲಿ ಈವರೆಗೆ777 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಸಂಗ್ರಹಿಸಲಾಗಿದೆ. ಭತ್ತ ಖರೀದಿಯೊಂದಿಗೆ, ಒಂದು ಕೋಟಿ ಹನ್ನೊಂದು ಲಕ್ಷಕ್ಕೂ ಹೆಚ್ಚು ರೈತರು ಒಂದು ಲಕ್ಷ 52ಸಾವಿರ ಕೋಟಿ ರೂ.ಗಳಿಗೂ ಅಧಿಕ ಕನಿಷ್ಠ ಬೆಂಬಲ ಬೆಲೆ ಮೌಲ್ಯದ ಪ್ರಯೋಜನ ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version