ಲೈಫ್ ಸ್ಟೈಲ್
ದೇಶದಲ್ಲಿ 225 ಮಿಲಿಯನ್ ಗೂ ಅಧಿಕ ಹ್ಯಾಂಡ್ಸೆಟ್ ಉತ್ಪಾದನೆ ; 3 ಲಕ್ಷ ಕೋಟಿ ರೂ. ಉಳಿತಾಯ
ಸುದ್ದಿದಿನ ಡೆಸ್ಕ್ : ಸ್ವದೇಶಿ ಮೊಬೈಲ್ ಫೋನ್‌ಗಳ ಉತ್ಪಾದನೆಗೆ ಉತ್ತಮ ಪರಿಸರ ಕಲ್ಪಿಸಿದ್ದರಿಂದ ದೇಶಕ್ಕೆ 3 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ದೇಶಿ ಮೊಬೈಲ್, ಬಿಡಿಭಾಗಗಳ ಉತ್ಪಾದನೆ ಮಾಡಿರುವುದರಿಂದ ದೊಡ್ಡ ಮೊತ್ತದ ಹಣ ದೇಶಕ್ಕೆ ಉಳಿತಾಯವಾಗಿದೆ ಎಂದು ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ತಿಳಿಸಿದೆ.
2017-18ನೇ ಸಾಲಿನಲಗಿದ್ಲಿ 225 ಮಿಲಿಯನ್ ಗೂ ಅಧಿಕ ಹ್ಯಾಂಡ್ಸೆಟ್‌ಗಳನ್ನು ಉತ್ಪಾದಿಸಲಾಗಿದೆ. ಇದು ಮಾರುಕಟ್ಟೆಗೆ ಅಗತ್ಯವಿರುವ ಸರಕುಗಳ ಶೇ. 80ರಷ್ಟು ನೀಡಲಾಗಿದೆ. 1,65,000 ರೂ. ಮೌಲ್ಯದ ಲೋಕಲ್ ಮೊಬೈಲ್ ಹ್ಯಾಂಡ್ ಸೆಟ್‌ಗಳನ್ನು ಗಳಿಸಲಾಗಿದೆ. 2018-19ನೇ ಅವಧಿಯಲ್ಲಿ 290 ಮಿಲಿಯನ್ ವ್ಯವಹಾರ ನಡೆದಿದೆ. ಮೊದಲೆರಡು ತ್ರೈಮಾಸಿಕ ಅವಧಿಯಲ್ಲಿ 75,000 ಕೋಟಿ ರೂ. ಮೌಲ್ಯದ 130 ಮಿಲಿಯನ್ ಹ್ಯಾಂಡ್ಸೆಟ್‌ಗಳನ್ನು ಉತ್ಪಾದಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್ |9986715401