ದಿನದ ಸುದ್ದಿ

ಬಿಸಿಯೂಟ ಸೇವಿಸಿದ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಳಗಾವಿ : ಬಿಸಿಯೂಟ ಸೇವಿಸಿದ 60 ಮಕ್ಕಳ ಅಸ್ವಸ್ಥ ಗೊಂಡಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಲಕನಾಯಕನ ಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಬುಧವಾರ (ಜೂನ್) ಮಧ್ಯಾಹ್ನ ಬಿಸಿಯೂಟ ಸೇವಿಸಿ ಬಳಿಕ ಶಾಲೆಯ 60ಕ್ಕೂ ಹೆಚ್ಚು ಮಕ್ಕಳು ಹೊಟ್ಟೆ ನೋವೆಂದು ಕಿರುಚಾಡ ತೊಡಗಿದ್ದು, ವಾಂತಿ ಬೇಧಿಯೂ ಕೂಡ ಆಗಿದೆ. ಕೂಡಲೇ ಅಸ್ವಸ್ಥ ಮಕ್ಕಳನ್ನೆಲ್ಲ ರಾಮದುರ್ಗ ದ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ಕರೆತಂದಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಫುಡ್ ಪಾಯಿಸನಿಂಗ್ ಆಗಿದೆ ಎಂದು ಹೇಳಿದ್ದಾರೆ. ಚಿಕಿತ್ಸೆಯನ್ನು ವೈದ್ಯರು ಮುಂದುವರೆಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version