ದಿನದ ಸುದ್ದಿ

ದೇವರಹಟ್ಟಿಗೆ ಮೌಲಾನ ಅಜಾದ್ ಶಾಲೆ : ವಕ್ಫ ಮಂಡಳಿ ಅಧ್ಯಕ್ಷ ಮಹಮದ್ ಸಿರಾಜ್

Published

on

ಸುದ್ದಿದಿನ,ದಾವಣಗೆರೆ : ಅಲ್ಪಸಂಖ್ಯಾತರ ಹೆಚ್ಚಿರುವ ದಾವಣಗೆರೆ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ಮೌಲಾನ ಆಜಾದ್ ಶಾಲೆ ತರುವ ಪ್ರಯತ್ನ ಮಾಡುವುದರ ಜೊತೆಗೆ ಈ ಗ್ರಾಮಕ್ಕೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆಯನ್ನು ಮಂಜೂರು ಮಾಡಿಸುವುದಾಗಿ ಜಿಲ್ಲಾ ವಕ್ಫ ಮಂಡಳಿ ಅಧ್ಯಕ್ಷರಾದ ಮಹಮದ್ ಸಿರಾಜ್ ಭರವಸೆ ನೀಡಿದ್ದಾರೆ.

ತಾಲೂಕಿನ ದೇವರಹಟ್ಟಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಮುಂದುವರೆದಿದ್ದು, ಅದರಂತೆ ದಾವಣಗೆರೆ ಜಿಲ್ಲೆಯ ಶಿಕ್ಷಣದ ಶಕ್ತಿಯನ್ನು ಅರಿತುಕೊಳ್ಳಬೇಕೆಂದರು.

ಮತ್ತೋರ್ವ ಮುಖ್ಯ ಅತಿಥಿಯಾದ
ಉಡುಪಿ ಜಿಲ್ಲೆಯ ವಕ್ಫ ಮಂಡಳಿ ಅಧ್ಯಕ್ಷ ಯಾಯ್ಯ ಸಾಬ್ ಮಾತನಾಡಿ, ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿ ಹೇಳಿದರು.

ಸಸಿಗೆ ನೀರಿರುವುದರ ಮೂಲಕ ಶಾಲಾ ವಾರ್ಷಿಕೋತ್ಸವವನ್ನು
ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ಕಚೇರಿ ದಾವಣಗೆರೆ ಇಸಿಓ ಹಿದಾಯತ್ ವುಲ್ಲಾ ಅನ್ಸಾರಿ ಉದ್ಘಾಟಿಸಿದರು. ಪ್ರಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಸಮೀಮ್ ಭಾನು ಅಧ್ಯಕ್ಷತೆ ವಹಿಸಿದ್ದರು, ಶ್ರೀಮತಿ ಸಿದ್ದಿಖಾ ಮುಝಮಿಲ್, ಅಮೀರ್ ಇರ್ಷಾದ್, ಗೌಹರ್ ಬಾನು,ಕಲೀಂ ವುಲ್ಲಾ ಪಟೇಲ್, ಶಕೀಲಾ ರಹಮ್ಮತ್ ವುಲ್ಲಾ,ಕೆಂಚಮ್ಮ ಮಂಜಪ್ಪ,ನಾಜೀಮ ಸಮಿ ವುಲ್ಲಾ, ಸುಲೇಮಾನ್ ಸಾಹೇಬ್,
ಸೇರಿದಂತೆ ಗ್ರಾಮದ ಮುಖಂಡರುಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version