ದಿನದ ಸುದ್ದಿ
ಕಲಬುರಗಿ ಬುದ್ಧ ಮಂದಿರದಲ್ಲಿ ಮೌಢ್ಯಾಚರಣೆ
ಸುದ್ದಿದಿನ ಡೆಸ್ಕ್: ಕಲಬುರಗಿಯಲ್ಲಿರುವ ಬುದ್ಧ ಮಂದಿರದಲ್ಲಿ ಮೌಢ್ಯಾಚರಣೆ ಪಾಲನೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಶುಕ್ರವಾರ ಖಗ್ರಾಸ ಚಂದ್ರಗ್ರಹಣವಾದ ಕಾರಣ ಮಂದಿರದೊಳಗೆ ಬುದ್ಧನ ಅನುಯಾಯಿಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮಂದಿರದ ಗೇಟ್‌ನಲ್ಲಿ ಈ ಕುರಿತ ಫಲಕವನ್ನೂ ಹಾಕಲಾಗಿತ್ತು. ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಮಂದಿರದೊಳಗೆ ಸಂಜೆ ನಾಲ್ಕು ಗಂಟೆಯ ನಂತರ ಪ್ರವೇಶ ನಿಷೇಧಿಸಲಾಗಿದೆ. ದಯವಿಟ್ಟು ಸಹಕರಿಸಿ ಎಂಬು ಬೋರ್ಡ್ ಹಾಕಲಾಗಿತ್ತು.
ಅದರ ನಂತರವೂ ಬಂದ ಅನುಯಾಯಿಗಳನ್ನು ಗೇಟ್‌ನ ಹೊರಗೆ ಕೂರಿಸಲಾಗಿತ್ತು. ಫೇಸ್‌ಬುಕ್‌ನಲ್ಲಿ ಈ ಕುರಿತ ಪೋಸ್ಟ್‌ವೊಂದು ಹಂಚಿಕೆಯಾಗಿದ್ದು, ಇದರ ಬಗ್ಗೆ ಬಳಕೆದಾರರು ಕಟುವಾಗಿ ಟೀಕಿಸುತ್ತಿದ್ದಾರೆ.
ಗೌತಮ ಬುದ್ಧ ಎಲ್ಲ ಮೌಢ್ಯಗಳನ್ನು ಬದಿಗೆ ಸರಿಸಿ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿದ ಆದರೆ, ಆತನ ಅನುಯಾಯಿಗಳು ಮೌಢ್ಯಕ್ಕೆ ಕಟ್ಟುಬಿದ್ದಿರುವುದು ದುರಂತ ಎಂಬ ಕಮೆಂಟ್‌ಗಳು ಹೆಚ್ಚಾಗಿ ವ್ಯಕ್ತವಾಗಿವೆ.