ಸಿನಿ ಸುದ್ದಿ

ಸಕತ್ ವೈರಲ್ ಆಯ್ತು ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಪೋಸ್ಟರ್; ದೀಪಾವಳಿಗೆ ರಿಲೀಸ್

Published

on

ಸುದ್ದಿದಿನ ದಾವಣಗೆರೆ: ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ಟ್ವಿಟರ್ ನಲ್ಲಿ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು, ಅಮಿರ್ ಖಾನ್ ಅಭಿಮಾನಿಗಳು ಪೋಸ್ಟರ್ ಗೆ ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಸ್ಪೆಷಲ್ ಲೂಕ್ನಲ್ಲಿ ಕಾಣಿಸಿಕೊಂಡಿರುವ ಅಮಿರ್ ಖಾನ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಮಿರ್ ಖಾನ್ ಕತ್ತೆ ಮೇಲೆ ಕುಳಿತಿರುವ ಪೋಸ್ಟರ್ ಸೋಷಿಯಲ್ ಮಿಡಿಯಾದಲ್ಲಿ ರಿಲೀಸ್ ಮಾಡಿದ್ದಾರೆ. ಕತ್ತೆ ಮೇಲೆ ಕುಳಿತ ಅಮಿರ್ ಖಾನ್ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಯಾವುದೇ ರೋಲ್ ಕೊಟ್ಟರೂ ಸಂಪೂರ್ಣವಾಗಿ ತೊಡಗಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸುವ ಅಮಿರ್ ಖಾನ್ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಅಭಿಮಾನಿಗಳಲ್ಲಿ ಬಹುನಿರೀಕ್ಷೆ ಹುಟ್ಟಿಹಾಕಿದೆ.

ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಅಭಿನಯಿಸುತ್ತಿದ್ದು, ಫಿರಂಗಿ ಪಾತ್ರದಲ್ಲಿ ಕಾಣಿಸಿಕೊಂಡು ಕ್ಯುರಿಯಸಿಟಿ ಹುಟ್ಟಿ ಹಾಕಿದ್ದಾರೆ. ಅಮಿತಾಭ್ ಬಚ್ಚನ್, ಕತ್ರಿನಾ ಕೈಫ್ ಸೇರಿ ದಿಗ್ಗಜರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಹಿಂದಿಯಲ್ಲಿ ಪೋಸ್ಟರ್ ಬಿಡುಗಡೆಯಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಚಿತ್ರ ರಿಲೀಸ್ ಮಾಡಲು ರೆಡಿಯಾಗುತ್ತಿದೆ.

Trending

Exit mobile version