ಲೈಫ್ ಸ್ಟೈಲ್
Mrs.ಕರ್ನಾಟಕ ; U ಟರ್ನ @ 40 !
ಹೆಣ್ಣು ಅಲಂಕಾರ ಪ್ರಿಯೆ,ಸೌಂದರ್ಯ ಪ್ರಿಯೆ. ಸೌಂದರ್ಯ ಅನ್ನೋದು ಹೆಣ್ಣಿಗೆ ದೇವರು ಕೊಟ್ಟಿರೋ ಒಂದು ವಿಶೇಷ ಉಡುಗೊರೆ.ಪ್ರತಿ ಮಹಿಳೆಯು ತನ್ನದೇ ರೀತಿಯಲ್ಲಿ ಸೌಂದರ್ಯವತಿ. ಅಥವ ಸೌಂದರ್ಯ ಪದಕ್ಕೆ ಪರ್ಯಾಯವೇ ಹೆಣ್ಣು ಅನ್ನಬಹುದು.
ಕಾಲ ಬದಲಾದಂತೆ, ಫ್ಯಾಷನ್ ದುನಿಯಾ ಕೂಡ ಬದಾಗಿದೆ. ಕೇವಲ ಹದಿಹರೆಯದ ಯುವತಿಯರಿಗೆ ಮಾತ್ರವೇ ಸೀಮಿತವಾಗಿದ್ದ ಸೌಂದರ್ಯ ಸ್ಪರ್ಧೆ ಗಳು ಈಗ ಎಲ್ಲಾ ವಯೋಮಾನದವರನ್ನೂ ಕೈ ಬೀಸಿ ಕರೆಯುತ್ತಿದೆ. ಅಂತಹ ಒಬ್ಬ ಸೌಂದರ್ಯ ವತಿಯ ಪರಿಚಯ ಇಲ್ಲಿದೆ.
ಹೆಸರು ಹರಿಣಾಕ್ಷಿ , ಹೆಸರಿಗೆ ತಕ್ಕಂತೆ ಸದಾ ಹುಮ್ಮಸ್ಸಿನ ಚಿಲುಮೆಯಂತೆ ಜಿಗಿಯುವ , ನಲವತ್ತರ ಪ್ರಾಯದ ಹರಿಣಾಕ್ಷಿ ಪ್ರಭಾಕರ್ ಈ ಬಾರಿಯ” Mrs.ಕರ್ನಾಟಕ 2018″ ನ ವಿಜೇತೆ.
ಮೇ 27ರಂದು, ಗೋವಾ ದಲ್ಲಿ ಏರ್ಪಡಿಸಿದ್ದ Mrs.ಇಂಡಿಯಾ ಬ್ಯೂಟಿ ಕ್ವೀನ್ ಸೌತ್ ಏರ್ಪಡಿಸಿದ್ದ ಸೌಂದರ್ಯ ಸ್ಪರ್ಧೆ ಯಲ್ಲಿ ಕರ್ನಾಟಕ ರಾಜ್ಯ ವನ್ನು ಹರಿಣಿ ಪ್ರತಿನಿಧಿಸಿದ್ದು, ಒಟ್ಟು ಎಪ್ಪತ್ತೆಂಟು ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಸ್ಪರ್ಧೆಯ ಎಲ್ಲಾ ಸುತ್ತುಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಹರಿಣಿ ಅವರ ಮೂಡಿಗೆ “2018ರ Mrs. ಕರ್ನಾಟಕ “ದ ಕಿರೀಟ ಅಲಂಕರಿಸಿದೆ.
ಈ ಗುಳಿ ಕೆನ್ನೆಯ ಚೆಲುವೆ ಡ್ಯಾನ್ಸ್ ರೌಂಡ್ನಲ್ಲಿ ಮಾಧುರಿ ದೀಕ್ಷಿತ ರ ಏಕ್ ದೋ ತೀನ್ ಹಾಡಿಗೆ ಇವರು ಮಾಡಿದ ನೃತ್ಯ ಪ್ರೇಕ್ಷಕರಲ್ಲಿ ರೋಮಾಂಚನ ಹುಟ್ಟಿಸಿತ್ತು.
ಈ ಹಿಂದೆ ಅಕ್ಷಯ ತೃತೀಯ ದ ಅಂಗವಾಗಿ ಮಲಬಾರ್ ಗೋಲ್ಡ್ ಜಿವೆಲ್ಸ್ ರವರು ಹಮ್ಮಿಕೊಂಡಿದ್ದ Mrs.ಮಂಗಳೂರು ಜಿವೆಲ್ಸ್ ನ ರನ್ನರ್ ಅಪ್ ಆಗಿಯೂ ಮಿಂಚಿದ್ದರು.
ಕೊಯಂಬತ್ತೂರಿನಲ್ಲಿ ಪ್ರತಿಷ್ಠಿತ ಉಡುಪುಗಳ ವಿನ್ಯಾಸ ಭಾರ್ತಿ ಸ್ಟೆಫೀ ಅವರ ” ತ್ರೆಡ್ಸ್ ಅಂಡ್ ನೀಡಲ್ಸ್” ಫ್ಯಾಷನ್ ಶೋ ನ ಶೋ ಸ್ಟಾರ್ ಆಗಿಯೂ ಮಿಂಚಿದ್ದಾರೆ.
ಇವರನ್ನು ನೋಡಿಯೇ ಹಿರಿಯರು ಈ ಮಾತು ಹೇಳಿದರೇನೋ..”ವಯಸ್ಸು ಬರೀ ಸಂಖ್ಯೆ ಅಷ್ಟೇ”! ಕಣ್ಣ ಮುಂದೆ ಗುರಿ, ಅದನ್ನು ಸಾಧಿಸುವ ಛಲವೊಂದಿದ್ದರೆ ಸಾಕು, ಏನನ್ನು ಬೇಕಾದರೂ ಗೆಲ್ಲಲು ಬಹುದು, ಎಂಬುದಕ್ಕೆ ಇವರೇ ಸಾಕ್ಷಿ. ನಲವತ್ತುಮೂರರ ಪ್ರಚಾರದಲ್ಲಿ ಕಾಲೇಜು ಕನ್ಯೆ ಯರನ್ನೂ ನಾಚಿಸುವಂಥ ಸೌಂದರ್ಯವತಿ. ಮೂಲತಹ ಬೆಂಗಳೂರಿನಲ್ಲ ಆದ ಹರಿಣಿ ಹುಟ್ಟಿದ್ದು ಬೆಳೆದದ್ದು ಶೇಷಾದ್ರಿಪುರಂ ನಲ್ಲಿ. ಬಿ.ಕಾಂ ಪದವೀಧರೆ. ಚಿಕ್ಕ ವಯಸ್ಸಿನಲ್ಲೇ ಪ್ರಭಾಕರ್ ರೊಂದಿಗೆ ವಿವಾಹವಾಗಿ , ಎರಡು ಮುದ್ದಾದ ಮಕ್ಕಳ ತಾಯಿ. ಪ್ರಸ್ತುತ ಡಿಪ್ಲೊಮಾ ಇನ್ ಕರಿಯರ್ ಕೌಂಸಲಿಂಗ್ ಮಾಡಿದ್ದು, ಕೌಂಸಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕ ಕ್ಕೆ ಕೌಂಸಲಿಂಗ್ ಮಹತ್ವ ಸೇರುವುದು ಇವರ ಗುರಿ. ಇವರ ಕನಸು ಇಷ್ಟಕ್ಕೆ ನಿಂತಿಲ್ಲ.ತಮ್ಮ ಸೌಂದರ್ಯ ಪಯಣವನ್ನ ಮುಂದುವರೆಸುತ್ತಾ, ಮುಂದೆ Mrs.ಇಂಡಿಯಾ.. Mrs.ಯುನಿವರ್ಸ..ಆಗುವ ಗುರಿ ಹೊಂದಿದ್ದಾರೆ.
ನಲವತ್ತರ ಪ್ರಾಯದಲ್ಲೂ ಹೇಗೆ ಫಿಟ್ ಆಗಿದ್ದು ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂಬುದಕ್ಕೆ ಹರಿಣಾಕ್ಷಿ ಪ್ರಭಾಕರ್ ಅವರೇ ಸಾಕ್ಷಿ.
ಫ್ಯಾಷನ್ ಫೈರ್!
1.ಹರಿಣಾಕ್ಷಿ ಅವರ ದೃಷ್ಟಿಯಲ್ಲಿ ಫ್ಯಾಷನ್ ಅಂದರೆ ಏನು?
“ಫ್ಯಾಷನ್ ಅಂದರೆ ನಾನು, ನಾನೇ ಫ್ಯಾಷನ್ ” ಎನ್ನುತ್ತಾರೆ ಹರಿಣಾಕ್ಷಿ.
2. ನಿಮ್ಮ ಪ್ರಕಾರ ಟ್ರೆಂಡ್ ಏನು?
ನೀವು ಇವತ್ತು ಧರಿಸುವ ಉಡುಪು ನಾಳೆ ಟ್ರೆಂಡ್ ಆಗುತ್ತದೆ.
3. 2018 ರ ಫ್ಯಾಷನ್ ಕಲರ್ ಯಾವುದು?
ಬ್ಲಾಕ್
4. ನಿಮ್ಮ ಆಲ್ ಟೈಮ್ ಫೇವರಿಟ್ ಡ್ರೆಸ್?
ಸದಾ ಆರಾಮದಾಯಕ ಅನಿಸುವುದೇ ಜೀನ್ಸ್ ಮತ್ತು ಟಾಪ್.
5. ನಿಮ್ಮ ಒಂದು ಫ್ಯಾಷನ್ ಆಡಿಕ್ಷನ್?
ಡೆನಿಮ್ ಪ್ರಿಯೆ
6.ನಿಮ್ಮ ಸಿಗ್ನೇಚರ್ ಸ್ಟೈಲ್ ಏನು?
“ನಗು”.. ಸದಾ ನಗುನಗುತ್ತಾ ಇರುವುದೇ ನನಗೆ ಇಷ್ಟ. ಪಕ್ಕಾಗುತ್ತಾರೆ ಬೀಳುವ ಗುಳಿಗೆ ಕೆನ್ನೆಯೇ ನನ್ನ ಸ್ಟೈಲ್..
7.ಇತರ ಮಹಿಳೆಯರಿಗೆ ನಿಮ್ಮ ಕಿವಿಮಾತು…
” ಕನಸು ಎಲ್ಲರೂ ಕಾಣುತ್ತಾರೆ, ಆದರೆ ಅದನ್ನ ಸಾಕಾರ ಗೊಳಿಸಿಕೊಳ್ಳುವುದು ಮುಖ್ಯ.. ಅದು ನಮ್ಮ ಕೈಯಲ್ಲಿಯೇ ಇದೆ.ಮಾಡುವ ಮನಸ್ಸು, ಛಲ ಇರಬೇಕಷ್ಟೇ. ನಮ್ಮ ಹಣೆಬರಹ ಬರೆಯುವವರು ನಾವೇ..”