ಸಿನಿ ಸುದ್ದಿ

‘ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಪಾರ್ಟ್ 2’ ಬರಲಿದೆಯಂತೆ..!

Published

on

ಸುದ್ದಿದಿನ ಡೆಸ್ಕ್ : ಲಿಕಾಫ್ಟರ್ ಶಾಟ್ ಮಾಂತ್ರಿಕ ಧೋನಿಯ ‘ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ’ ಸಿನೆಮಾ ಬರ್ಜರಿ ಹಿಟ್ ಆಗಿತ್ತು. ಈ ಸಿನೆಮಾದಲ್ಲಿ ನಡ ಸುಶಾಂತ್ ರಜಪೂತ್ ಗೆ ಒಳ್ಳೆಯ ಹೆಸರು ಬಂದಿತ್ತೂ ಕೂಡಾ.

ಈಗ ಧೋನಿ ಪ್ರಿಯರಿಯರಿಗೆ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ ಧೋನಿಯ ಕುರಿತಾದ ಈ ಸಿನೆಮಾದ ಪಾರ್ಟ್2 ಬರಲಿದೆಯಂತೆ. ಪಾರ್ಟ್ 1 ರಲ್ಲಿ ಧೋನಿ ಪಾತ್ರ ಮಾಡಿದ್ದ ಸುಶಾಂತ್ ಅವರೇ ಪಾರ್ಟ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಭಾಗ-1 ರಲ್ಲಿ ಧೋನಿ 2011 ರ ವಿಶ್ವಕಪ್ ಗೆಲ್ಲುವವರೆಗೆ ಕತೆ ಇತ್ತು. ಇದೀಗ ಎರಡನೇ ಭಾಗದಲ್ಲಿ ವಿಶ್ವಕಪ್ ನಂತರ ಧೋನಿಯ ವೃತ್ತಿ ಬದುಕು, ವೈಯಕ್ತಿಕ ಬದುಕು ಒಳಗೊಂಡ ಕತೆಯಿರುತ್ತದಂತೆ.

ಪಾರ್ಟ್ 1 ರಲ್ಲಿ ಧೋನಿಯು 2011 ರ ವಿಶ್ವಕಪ್ ಗೆಲ್ಲುವವರೆಗೆ ಕಥಾಹಂದವಿತ್ತು. ಪಾರ್ಟ್ 2 ನಲ್ಲಿ ಧೋನಿಯ ಜೀವನ, ವೃತ್ತಿ ಕುರಿತಾದ ಮಾಹಿತಿಯುಳ್ಳ ಕಥಾಹಂದರವಿರುವ ಚಿತ್ರಕಥೆ ಸಿದ್ದವಾಗಿದೆಯಂತೆ.

ವಿಶೇಷವಾಗಿ ಬೆಂಗಳೂರಿನಲ್ಲಿ ನಡೆ್ದದ ಐಪಿಎಲ್ ಮ್ಯಾಚ್ ನಲ್ಲಿ ಧೋನಿಯು ಚೆನೈ ಸೂಪರ್ ಕಿಂಗ್ಸ್ ಅನ್ನು ಗೆಲ್ಲಿಸಿದ ಬಗೆಗೆ ಕತೆಯನ್ನು ಒಳಗೊಂಡಿರುತ್ತದೆಯಂತೆ. ಅಂದಹಾಗೆ ಈ ಸಿನೆಮಾ ಮುಂದಿನ ವರ್ಷ ಶೂಟಿಂಗ್ ಆರಂಭಿಸಲಿದೆಯಂತೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version