ದಿನದ ಸುದ್ದಿ
ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಮೈಸೂರು ಇಲ್ಲಿ 2020-21ನೇ ಸಾಲಿನ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸ್‍ಗಾಗಿ ಪಿಜಿಸಿಇಟಿಬರೆದ, ಬಿ.ಇ.-ಮೆಕ್ಯಾನಿಕಲ್/ ಇಂಡಸ್ಟ್ರಿಯಲ್ ಪ್ರೊಡಕ್ಷನ್/ಆಟೋಮೊಬೈಲ್/ಮೇರಿನ್/ಆಟೋಮೇಷನ್ ಮತ್ತು ರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯು ಇಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜಿಟಿಟಿಸಿಯಲ್ಲಿ ನೀಡುವ ತರಬೇತಿಯು ಬೇರೆ ಸಾಂಪ್ರದಾಯಿಕ ತರಬೇತಿಗಿಂತ ಭಿನ್ನವಾಗಿದ್ದು ಇಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವುದಲ್ಲದೆ ದಿನದಿಂದ ದಿನಕ್ಕೆ ಬದಲಾಗುವ ತಂತ್ರಜ್ಞಾನದಲ್ಲಿ ಪರಿಣಿತಿ ಮತ್ತು ಅನುಭವ ಪಡೆಯಲು ಸಾಧ್ಯವಾಗಿರುತ್ತದೆ.
ಈ ಸಂಸ್ಥೆಯಲ್ಲಿ ಕೈಗಾರಿಕಾ ಘಟಕವಿರುವುದರಿಂದ ವಿದ್ಯಾರ್ಥಿಗಳು ಸಿಎನ್‍ಸಿ ಯಂತ್ರದಲ್ಲಿ ಕೆಲಸ ಮಾಡಬಹುದಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ನಿಯಮಿತ ಬೋಧನಾ ಚಟುವಟಿಕೆಗಳ ಜೊತೆಗೆ ಕೈಗಾರಿಕೆಯ ಅನುಭವ ದೊರೆಯುವುದು. ಈ ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ವಉದ್ಯೋಗಿ/ಉದ್ಯೋಗಿಗಳಾಗಲು ಸಹಕಾರಿಯಾಗುತ್ತದೆ ಮತ್ತು ಹೆಸರಾಂತ ಕೈಗಾರಿಕೆಗಳಲ್ಲಿ ಅತ್ಯುತ್ತಮವಾದ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ.
ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ದೇಶ, ವಿದೇಶದ ವಿವಿಧ ಕೈಗಾರಿಕೆಗಳಲ್ಲಿ ಬಹಳ ಬೇಡಿಕೆ ಇದೆ. ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಇನ್ಫೋಸಿಸ್, ಟಿ.ಸಿ.ಎಸ್, ಬೋಷ್, ಟೋಯೊಟಾ ಮುಂತಾದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು – 16. ಮೊಬೈಲ್ ನಂ : 9243989954 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಟಿಟಿಸಿ ಹರಿಹರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243