ದಿನದ ಸುದ್ದಿ

ಸಾಲ ಮನ್ನಾ ಬೇಡ್ವಂತೆ; ಇದು ಮೂಡಿಗೆರೆಯ ಸ್ವಾಭಿಮಾನಿ ರೈತನ ಮಾತು

Published

on

ಸುದ್ದಿದಿನ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ರೈತನೊಬ್ಬ ಸಾಲಮನ್ನಾ ಬೇಡವೆಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದು, ರಾಜ್ಯದ ರೈತರು, ಕೃಷಿ ಕ್ಷೇತ್ರ ಅನೇಕ ಜ್ವಲಂತ ಸಮಸ್ಯೆ ಎದುರಿಸುತ್ತಿದ್ದು, ಅವುಗಳತ್ತ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದ್ದಾನೆ.

ಎಂಎಚ್ ಅಮರನಾಥ ಮುಖ್ಯಮಂತ್ರಿಗೆ ಪತ್ರ ಬರೆದ ರೈತ. ಮೂಡಿಗೆರೆಯಲ್ಲಿ 11 ಎಕರೆ ಕೃಷಿ ಭೂಮಿಯಲ್ಲಿ ಕರಿಮೆಣಸು, ಕಾಫಿ ಇತರ ಬೆಳೆ ಬೆಳೆಯುತ್ತಾರೆ. ಖಾಸಗಿ ಬ್ಯಾಂಕ್‌ನಲ್ಲಿ ನಾಲ್ಕು ಬೆಳೆ ಸಾಲ ಮಾಡಿದ್ದಾರೆ. ಸಾಲ ಮನ್ನಾ ಯೋಜನೆ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಹಾಗಾಗಿ ನಾನು ಸಿಎಂಗೆ ಪತ್ರ ಬರೆಯುತ್ತಿದ್ದೇನೆ. ಆದರೆ, ಈ ಬಗ್ಗೆ ಬೇರೆ ರೈತರ ಅಭಿಪ್ರಾಯ ಗೊತ್ತಿಲ್ಲ. ಅವರು ಮನ್ನಾ ಸೌಲಭ್ಯ ಪಡೆಯುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ರೈತ ಅಮರನಾಥ ಮುಖ್ಯಮಂತ್ರಿಗೆ ಸಲಹೆವೊಂದು ನೀಡಿದ್ದು, GiveItUp LPG Subsidy ಅಂತಹ  ಯೋಜನೆ ಜಾರಿಗೊಳಿಸಬೇಕು. ಕುಮಾರಸ್ವಾಮಿ ಅವರ ಒಂದು ಲಕ್ಷ ಸಾಲ ಮನ್ನಾ ಯೋಜನೆ ಸ್ವಾಭಿಮಾನಿ‌ ಮತ್ತು ತನ್ನ ಕಷ್ಟದಲ್ಲೂ ಸಾಲ ಮರುಪಾವತಿ ಮಾಡುವ ರೈತರಿಗೆ ನೋವುಂಟು ಮಾಡಿದೆ. ಆದರೆ, ಅವಶ್ಯಕತೆ ಯೋಜನೆಯ ಲಾಭ ದೊರೆಯಲಿ ಎಂದೂ ತಿಳಿಸಿದ್ದಾರೆ.

ಸಮಸ್ಯೆಗಳಿಗೆ ಸ್ಪಂದಿದಲಿ:
ರಾಜ್ಯದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಕಲಿ ಗೊಬ್ಬರ, ಔಷಧ ಮಾರಾಟ, ಅವೈಜ್ಞಾನಿಕ ಬೆಂಬಲ ಬೆಲೆ, ದೋಷಪೂರಿತ ಬೆಳೆ ವಿಮೆ ಯೋಜನೆ ಅಂತಹ ಅನೆರಕ ಸಮಸ್ಯೆಗಳಿದ್ದು, ಇವುಗಳನ್ನು ಮೊದಲು ಬಗೆಹರಿಸಲಿ ಎಂದು ಆಗ್ರಹಿಸಿದ್ದಾರೆ. ಕಳೆದ ವರ್ಷ ಕರಿಮೆಣಸು ಬೆಳೆ ಹಾನಿಯಾಗಿತ್ತು‌. ಏಳು ಸಾವಿರ ವಿಮಾ ಕಂತು ಪಾವತಿಸಿದ್ದರೂ ಒಂದು ರೂಪಾಯಿಯೂ ಬಂದಿಲ್ಲ ಎಂದು ದೂರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version