ದಿನದ ಸುದ್ದಿ
ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ
ಸುದ್ದಿದಿನ,ಬಾಗಲಕೋಟೆ : ಪ್ರಸಕ್ತ ಸಾಲಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ದುಡಿಮೆ ಬಂಡವಾಳ ಸಾಲ ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಒದಗಿಸಲು ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ.6ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತಿದ್ದು, ಬ್ಯಾಂಕ್‍ನವರು ವಿಧಿಸುವ ಸಾಲದ ಮೇಲಿನ ಗರಿಷ್ಠ ಶೇ.7ರ ಬಡ್ಡಿಯನ್ನು ಸಾಲ ಮಂಜೂರಾದ ದಿನಾಂಕದಿಂದ 3 ವರ್ಷಗಳ ಅವಧಿಗೆ ಕೇಂದ್ರ ಸರಕಾರವು ಬಡ್ಡಿ ಸಹಾಯಧನವಾಗಿ ನೀಡಲಿದೆ.
ಸಾಲದ ಮೊಬಲಗಿನ ಶೇ.20 ಗರಿಷ್ಠ 10 ಸಾವಿರ ರೂ.ಗಳನ್ನು ಮಾರ್ಜಿನ್ ಮನಿಯಾಗಿ ಕೇಂದ್ರ ಸರಕಾರದಿಂ ಕ್ಲೇಮ್ ಮಾಡಿ ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ. ನೇಕಾರರ ಕೈಮಗ್ಗ ನೇಕಾರಿಕೆ ವ್ಯವಹಾರ ಆಧರಿಸಿ ಗರಿಷ್ಠ 50 ಸಾವಿರ ರೂ.ಗಳ ವರೆಗೆ ಸಾಲ ಒದಗಿಸಲಾಗುತ್ತದೆ.
ಸಾಲ ಪಡೆಯುವ ಕೈಮಗ್ಗ ನೇಕಾರರು ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ 15 ರೊಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235463ಗೆ ಸಂಪರ್ಕಿಸಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243