ಲೈಫ್ ಸ್ಟೈಲ್
ಆರೋಗ್ಯದ ಗಂಟು ಈ ದಂಟು ಸೊಪ್ಪು
ದಂಟಿನ ಸೊಪ್ಪು ಸೊಪ್ಪಿನಲ್ಲೇ ಅಗ್ರಸ್ಥಾನ ಪಡೆದಿದೆ. ಗ್ರಾಮೀಣ ಜನತೆಗೆ ಬಹಳ ಅಚ್ಚುಮೆಚ್ಚು. ಇದರಲ್ಲಿ ಎರಡು ವಿಧ. ಕೆಂಪು ಮತ್ತು ಬಿಳಿ ದಂಟು ಎಂದು. ಬೀಜ ಮೊಳೆತು 2 ರಿಂಧ 3 ವಾರಗಳಲ್ಲಿಯೇ ಇದನ್ನು ಸೊಪ್ಪಿನ ರೀತಿ ಉಪಯೋಗಿಸಬಹುದು.
ಇದರಲ್ಲಿ ಕೆಂಪು ಬಣ್ಣದ ದಂಟಿನಲ್ಲಿ ಹೆಚ್ಚು ರುಚಿಯನ್ನು ನೋಡಬಹುದು. ಸಂಸ್ಕøತದಲ್ಲಿ ಕುಂಡಲಿಮರ, ಮರೀಷರಕ್ತ, ಮೇಘ ಎಂಬ ಹೆಸರು. ವೈಜ್ಙಾನಿಕವಾಗಿ ಅಮರಂಥಸ್ (Amaranthas), ರೂಬ್ರ ಎನ್ನುತ್ತಾರೆ. ಮಧುರ (ಸಿಹಿ), ತಿಕ್ತ(ಕಹಿ) ಮತ್ತು ಒಗರಿನಿಂಧ ಕೂಡಿರುತ್ತದೆ.
ಔಷಧೀಯ ಗುಣಗಳು
- ಮೂಲವ್ಯಾಧಿಯಿಂದ ನರಳುತ್ತಿರುವವರು ದಂಟು ಸೊಪ್ಪಿನ ಕಷಾಯ ತಯರಿಸಿ ಪ್ರತಿದಿನ ಸೇವಿಸುತ್ತಾ ಬಂದಿರೆ, ಮೂಲವ್ಯಾಧಿಯಲ್ಲಿ ಗುಣ ಕಂಡು ಬರುವುದು.
- ಇದು ಶೀತ, ವೀರ್ಯವರ್ಧಕ ಉಳ್ಳದಾಗಿದ್ದು, ಸ್ವಲ್ಪ ಕಫದೋಷವುಂಟು. ಮಲಬದ್ಧತೆ, ರಕ್ತಹೀನತೆ ಉತ್ತಮ ಪಥ್ಯಾಹಾರ ಇದು.
- ನಿಯಮಿತವಾಗಿ ದಂಠು ಸೊಪ್ಪು ಸೇವನೆಯಿಂದ ಮಲಬದ್ದತೆ ನಿವಾರಣೆ ಆಗುತ್ತದೆ.
ದಿನನಿತ್ಯ ದಂಟು ಸೊಪ್ಪು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ. - ತಾಯಂದಿರಲ್ಲಿ ಎದೆ ಹಾಲಿನ ಕೊರತೆಯುಂಟಾದಾಗ ಒಂದು ಲೋಟ ತಾಜಾ ದಂಟಿನ ರಸದೊಡನೆ ಸ್ವಲ್ಪ ಜೇನುತುಪ್ಪ ಹಾಗೂ ಏಲಕ್ಕಿ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಾಲು ವೃದ್ಧಿಸುತ್ತದೆ.
- ತಲೆಕೂದಲು ಉದುರುತ್ತಿದ್ದರೆ, ದಂಟುಸೊಪ್ಪಿನ ಎಲೆಯನ್ನು ನುಣ್ಣಗೆ ರುಬ್ಬಿ ಅದರ ಲೇಪನವನನು ತಲೆಗೆ ಚೆನ್ನಾಗಿ ಹಚ್ಚಿಕೊಂಡು, ಒಂದು ಗಂಟೆಯ ನಂತರ
- ಸ್ನಾನಮಾಡಿದರಡ, ಕೂದಲುದುರುವುದು ಕಡಿಮೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.
- ಸ್ತ್ರೀಯರಲ್ಲಿ ಉಂಟಾಗುವವಂತಹ ಹೆಚ್ಚಿನ ಮುಟ್ಟು ಸ್ರಾವವನ್ನು ನಿಯಂತ್ರಿಸಲು ದಂಟು ಸೊಪ್ಪಿನ ಪಲ್ಯವನ್ನು ನಿಯಮಿತವಾಘಿ ಸೇವಿಸುವುದು ಒಳ್ಳೆಯದು.
- ದಂಟಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ.
- ದಂಟಿನ ಸೊಪ್ಪು ತಂಪು ಗುಣವುಳ್ಳದ್ದು.
- ಜ್ವರದಿಂದ ನರಳುತ್ತಿರುವವರಿಗೆ ದಂಠು ಸೊಪ್ಪಿನ ಪಲ್ಯ, ಹುಳಿ ಆರೋಗ್ಯಕ್ಕೆ ಒಳ್ಳೆಯದು. ಇದರಿಂಧ ಜ್ವರ ಕಡಿಮೆಯಾಗುತ್ತದೆ.
ಎಚ್ಚರಿಕೆ
ಈ ಸೊಪ್ಪನ್ನು ಇತರ ಬೇಳೆ ಅಥವಾ ಕಾಳಿನ ಜೊತೆ ಬೇಯಿಸಿ, ಉಪಯೋಗಿಸ ಬಹುದು.
ಆದರೆ ಹೆಚ್ಚು ಬೇಯಿಸಿದರೆ ಇದರ ಸಾರ ಹೋಗುತ್ತದೆ.
ನೂರು ಗ್ರಾಂ ದಂಟು ಸೊಪ್ಪಿನಲ್ಲಿರುವ ಪೋಷಕಾಂಶಗಳು
- ತೇವಾಂಶ – 90.8 ಗ್ರಾಂ
- ಸಸಾರಜನಕ – 4.90 ಗ್ರಾಂ
- ರಂಜಕ – 83.0 ಮಿಲಿ ಗ್ರಾಂ
- ಕೊಬ್ಬು – 0.04 ಗ್ರಾಂ
- ಪಿಷ್ಠ – 42.0 ಗ್ರಾಂ
- ಕ್ಯಾಲ್ಷಿಯಂ – 200 ಮಿಲಿ ಗ್ರಾಂ
- ಕಬ್ಬಿಣ – 25.05 ಮಿಲಿ ಗ್ರಾಂ
- ಪೊಟಾಷಿಯಂ – 314 ಮಿಲಿ ಗ್ರಾಂ
- ಥೈಯಾಮಿನ್ – 0.03 ಮಿಲಿ ಗ್ರಾಂ
- ಮ್ಯಾಗ್ನೀಷಿಯಂ – 247 ಮಿಲಿ ಗ್ರಾಂ
- ಸೋಡಿಯಂ – 230 ಮಿಲಿ ಗ್ರಾಂ
- ‘ಎ’ ಜೀವಸತ್ವ – 10970 ಇ.ಯು
- ‘ಬಿ’ ಜೀವಸತ್ವ – 36 ಮಿಲಿ ಸೆಂ. ಗ್ರಾಂ
- ‘ಸಿ’ ಜೀವಸತ್ವ – 150 ಮಿಲಿ ಗ್ರಾಂ
- ನಿಯಾಸಿನ್ – 11.1 ಮಿಲಿ ಗ್ರಾಂ
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401