ಲೈಫ್ ಸ್ಟೈಲ್
ಬಹುಪಯೋಗಿ ಚಕ್ಕೋತ ಸೊಪ್ಪು
ಚಕ್ಕೋತ ಸೊಪ್ಪು ಜನಪ್ರಿಯ ಸೊಪ್ಪು ತರಕಾರಿ. ಇದರ ವೈಜ್ಞಾನಿಕ ಹೆಸರು ಆಟ್ರಿಪ್ಲೆಕ್ಸ್ ಹಾರ್ಟಿನ್‍ಸಿಸ್, ಇದು ಚೆನ್ ಪೋಡಿಯೇಸಿ ಎಂಬ ಕುಟುಂಬ ವರ್ಗಕ್ಕೆ ಸೇರಿದೆ.
ಇದೊಂದು ವಾರ್ಷಿಕ ತರಕಾರಿ ಸೊಪ್ಪು ಇದು ಸುಮಾರು ಎರಡು ಮೀಟರ್‍ನಷ್ಟು ಎತ್ತರಕ್ಕೆ ಬೆಳೆಯುತ್ತದೆ.
ಇದರ ಹಸಿರು ಮತ್ತು ಗುಲಾಬಿ ಬಣ್ಣದಿಂದ ಕೂಡಿರುವ ಎಲಡಗಳು ಚೂಪಾಗಿರುತ್ತವೆ. ಈ ಸೊಪ್ಪನ್ನು ಜಮ್ಮು ಮತ್ತು ಕಾಶ್ಮೀರದ ಕಡೆ ಬೇಸಿಗೆ ಕಾಲದಲ್ಲಿ ಬೆಳೆದರೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಚಳಿಗಾಲದಲ್ಲಿ ಹೆಚ್ಚು ಬೆಳೆಯುತ್ತದೆ.
ಈ ಸೊಪ್ಪನ್ನು ಚೆಕ್ವಾಕ್ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಆಂಗ್ಲದಲ್ಲಿ ಬರಾಚ್ ಹಾಗೂ ಏತಾಂಟಸ್ ಸ್ಪಿನಾಕ್ ಎಂದೂ ಕರೆಯುತ್ತಾರೆ.ಚಕ್ಕೋತ ಸೊಪ್ಪಿನಲ್ಲಿ ಹತ್ತು ಹಲವು ಔಷಧೀಯ ಗುಣಗಳು, ಪೋಷಕಾಂಶಗಳೂ ಇವೆ.
ಚಕೋತ ಸೊಪ್ಪಿನ ಔಷಧೀಯ ಗುಣಗಳು
- ನಿಯಮಿತವಾಗಿ ಆಹಾರದಲ್ಲಿ ಚಕ್ಕೋತ ಸೊಪ್ಪು ಬಳಸುವುದರಿಂದ ಮಲಬದ್ದತೆ ಗುಣವಾಗುತ್ತದೆ.
- ಆಹಾರದಲ್ಲಿ ಚಕ್ಕೋತ ಸೊಪ್ಪು ಬಳಸುವುದರಿಂದ ಕಾಮಾಲೆ ರೋಗಿಗಳಿಗೆ ಒಳ್ಳೆಯದು.
- ಚಕ್ಕೋತ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
- ಚಕ್ಕೋತ ಸೊಪ್ಪಿನ ಪಲ್ಯ ಅಥವಾ ಸಾರಿನ ರೂಪದಲ್ಲಿ ಸೇವಿಸುವುದರಿಂದ ಮೂತ್ರಕಲ್ಲು ಕಡಿಮೆಯಗುತ್ತದೆ.
- ಚಕ್ಕೋತ ಸೊಪ್ಪು ಮೂಲವ್ಯಾಧಿಯ ತೊಂದರೆಯಿಂದ ನರಳುತ್ತಿರುವವರಿಗೆ ಗುಣಕಾರಿ.
- ಆಹಾರದಲ್ಲಿ ಚಕ್ಕೋತ ಸೊಪ್ಪು ಒಂದು ಕ್ರಮದಲ್ಲಿ ಸೇವಿಸುವುದರಿಂದ ನರಗಳಿಗೆ ಚೈತನ್ಯ ಸಿಗುತ್ತದೆ.
ಚಕೋತ ಸೊಪ್ಪಿನಿಂದ ತಯಾರಿಸ ಬಹುದಾದ ಅಡುಗೆಗಳು
- ಚಕ್ಕೋತ ಸೊಪ್ಪಿನ ಪಲ್ಯ
- ಚಕ್ಕೋತ ಸೊಪ್ಪಿನ ಸಾರು
- ಚಕ್ಕೋತ ಸೊಪ್ಪಿನ ಹುಳಿ
- ಚಕ್ಕೋತ ಸೊಪ್ಪಿನ ಕೂಟು
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401