ದಿನದ ಸುದ್ದಿ

ಜಾನಪದ ಅಕಾಡೆಮಿ ಪ್ರಶಸ್ತಿಗೆ ಮುಮ್ತಾಜ್ ಬಿರಾದಾರ್ ಆಯ್ಕೆ

Published

on

ಸುದ್ದಿದಿನ,ಬಳ್ಳಾರಿ : ಕರ್ನಾಟಕ ಜಾನಪದ ಅಕಾಡಮಿ ನೀಡುವ 2018ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ, ಸಾಹಿತಿ ಲೇಖಕಿ ಡಾ.ಮುಮ್ತಾಜ್ ಬಿರಾದಾರ್ ಅವರ ಕೃತಿ ಆಯ್ಕೆಯಾಗಿದೆ.

ಜಾನಪದ ಸಾಹಿತ್ಯದಲ್ಲಿ ತವರು ಮನೆ ಪುಸ್ತಕವನ್ನ ಕರ್ನಾಟಕ ಜಾನಪದ ಅಕಾಡೆಮಿ ಆಯ್ಕೆ ಮಾಡಿದೆ. ಪ್ರಶಸ್ತಿಯೂ 25,000 ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ‌. ಫೆಬ್ರುವರಿ 7 ರಂದು ಚಾಮರಾಜ ನಗರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version