ದಿನದ ಸುದ್ದಿ
ಸೀಲ್‍ಡೌನ್ ಆಯ್ತು ದಾವಣಗೆರೆ ಮಹಾನಗರಪಾಲಿಕೆ..!
ಸುದ್ದಿದಿನ,ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಕೋವಿಡ್-19 ಸೋಂಕು ಪರೀಕ್ಷೆಯ ವರದಿಯು ಪಾಸಿಟಿವ್ ಎಂದು ಬಂದಿರುವುದರಿಂದ ಸೋಂಕು ನಿವಾರಕ ಸಿಂಪಡಿಸುವ ಪ್ರಯುಕ್ತ ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಜು.30 ಮತ್ತು 31 ರಂದು ಪಾಲಿಕೆಯ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿರುತ್ತದೆ.
ತೆರಿಗೆ ಪಾವತಿಗೆ ಬ್ಯಾಂಕಿನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಸಹಕರಿಸಬೇಕೆಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243