ದಿನದ ಸುದ್ದಿ
ದಾವಣಗೆರೆ : ರೌಡಿ ಶೀಟರ್ ‘ಬುಳ್ ನಾಗ’ನ ಬರ್ಬರ ಹತ್ಯೆ
ಸುದ್ದಿದಿನ,ದಾವಣಗೆರೆ : ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ನಾಗರಾಜ್ ಅಲಿಯಾಸ್ ಬುಳ್ ನಾಗಾ( 30) ನನ್ನು ಎಸ್ ಓಜಿ ಕಾಲೋನಿ ಬಳಿಯ ಎಸ್ ಎಸ್ ಆಸ್ಪತ್ರೆ ಹಿಂಭಾಗ ದುಷ್ಕೃಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ತೀವ್ರ ಗಾಯಗೊಂಡ ಬುಳ್ ನಾಗ್ ಆಸ್ಪತ್ರೆ ಗೆ ರವಾನೆ ಮಾಡಲಾಯಿತು ಆದರೆ ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿದ್ದಾನೆ. ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದಾಖಲಾಗಿದೆ.
ಈ ಹಿಂದೆ ಮೂರು ಬಾರಿ ನಡೆದ ದಾಳಿಯಲ್ಲಿ ಬಚಾವ್ ಆಗಿದ್ದ ಬುಳ್ಳ ನಾಗ ಕೊಲೆ, ಜೀವ ಬೆದರಿಕೆ, ಹಲ್ಲೆ ಸೇರಿದಂತೆ ಹತ್ತಕ್ಕು ಹೆಚ್ಚು ಪ್ರಕರಣಗಳಲ್ಲಿ ಭಾಗಿ ಆಗಿದ್ದ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243