ದಿನದ ಸುದ್ದಿ

ಚನ್ನಗಿರಿ ಖಾಸಗಿ ಬಸ್ ಏಜೆಂಟ್ ಬರ್ಬರ ಹತ್ಯೆ

Published

on

ಜಾಕೀರ್ ಕೊಲೆಯಾದ ವ್ಯಕ್ತಿ

ಸುದ್ದಿದಿನ,ಚನ್ನಗಿರಿ : ಪಟ್ಟಣದ ಕೈಮರ ವೃತ್ತದಲ್ಲಿ‌ ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಖಾಸಗಿ ಬಸ್ ಏಜೆಂಟ್ ಜಾಕೀರ್ ಎಂಬಾತನನ್ನು ಕಡ್ಲೆಕಾಯಿ ವ್ಯಾಪಿ ಸಲೀಂ ಚಾಕುವಿನಿಂದ ಚುಚ್ಚಿ ಹತ್ಯೆ ಗೈದಿರುವ ಘಟನೆ ನಡೆದಿದೆ.

ನಲ್ಲೂರಿನ ಜಾಕೀರ್ ಕೈಮರ ವೃತ್ತದಲ್ಲಿ ಕೂತಿರುವ ಸಂದರ್ಭದಲ್ಲಿ ಸಲೀಂ ಏಕಾಏಕಿ ದಾಳಿ ನಡೆಸಿ ಮನಬಂದಂದೆ ಚಾಕುವಿನಿಂದ ಇರಿದು ಕೊಂದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಲೆ ಮಾಡಿದ ನಂತರ ಸಲೀಂ ತಾನೇ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version