ದಿನದ ಸುದ್ದಿ

ಚಿತ್ರದುರ್ಗ | ಐವರು ಸಾಧಕರಿಗೆ ‘ಮುರುಘಾ ಶ್ರೀ ಪ್ರಶಸ್ತಿ’ ಘೋಷಣೆ..!

Published

on

ಸುದ್ದಿದಿನ, ಚಿತ್ರದುರ್ಗ : ಬಸವಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ಶರಣಸಂಸ್ಕೃತಿ ಉತ್ಸವದಲ್ಲಿ ಕೊಡಮಾಡುವ ‘ಮುರುಘಾಶ್ರೀ ಪ್ರಶಸ್ತಿ‘ಗೆ ಈ ಬಾರಿ‌ ನಟ ಡಾ. ಮುಖ್ಯಮಂತ್ರಿ ಚಂದ್ರು ಸೇರಿದಂತೆ ಐವರು ಸಾಧಕರು ಭಾಜನರಾಗಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ಶರಣ ಸಂಸ್ಕೃತಿ ಉತ್ಸವ 2020 ರ ‘ಮುರುಘಾ ಶ್ರೀ ಪ್ರಶಸ್ತಿ‘ಯನ್ನು, ಡಾ. ಮುಖ್ಯಮಂತ್ರಿ ಚಂದ್ರು
ಚಲನಚಿತ್ರ ನಟರು, ಬೆಂಗಳೂರು, ಜಸ್ಟೀಸ್ ಶ್ರೀ ಹೆಚ್. ಬಿಲ್ಲಪ್ಪ ವಿಶ್ರಾಂತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛನ್ಯಾಯಾಲಯ,ಪೂಜ್ಯಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು
ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ, ಹುಲಸೂರು
,ಮದ್ಯಪಾನ ವಿರೋಧಿ ಆಂದೋಲನ ಸಮಿತಿ
ಸುರತ್ಕಲ್, ಕರ್ನಾಟಕ ಹಾಗೂ ಎಸ್. ಷಣ್ಮುಖಪ್ಪ
ಧರ್ಮದರ್ಶಿಗಳು ಎಸ್. ನಿಜಲಿಂಗಪ್ಪ ಟ್ರಸ್ಟ್, ಚಿತ್ರದುರ್ಗ ಇವರುಗಳಿಗೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಜ. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು,
ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಟಿ.ಎಸ್.ಎನ್. ಜಯಣ್ಣ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಪಟೇಲ್ ಶಿವಕುಮಾರ್, ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಎಸ್.ಷಣ್ಮುಖಪ್ಪ, ರೆ.ಫಾದರ್ ರಾಜು, ಶ್ರೀಮತಿ ಗಾಯತ್ರಿ ಶಿವರಾಂ ಮುಂತಾದವರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version