ದಿನದ ಸುದ್ದಿ
ಹಿಂದೂ ಗರ್ಭಿಣಿ ಜೀವ ಉಳಿಸಲು ರೋಜಾ ಮುರಿದ ಯುವಕ
ಸುದ್ದಿ ದಿನ ಡೆಸ್ಕ್: ಮಾನವೀಯತೆ ಮುಂದೆ ಧರ್ಮ ಜಾತಿಗಳು ನಗಣ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಹುಬ್ಬಳ್ಳಿಯ KIMS ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿಂದೂ ಸಮುದಾಯದ ಗರ್ಭಿಣಿಗೆ ಬಹಳ ತುರ್ತಾಗಿ B+ve ರಕ್ತ ಬೇಕಾಗಿತ್ತು. ಈ ಸಂದರ್ಭದಲ್ಲಿ ಸಂಬಂಧಿಕರ ಕೋರಿಕೆ ಮೇರೆಗೆ ಹಾಗೂ ರೆಡ್ ಡ್ರಾಪ್ ಎಂಬ ರಕ್ತ ದಾನಿಗಳ ಫೇಸ್ ಬುಕ್ ಗ್ರೂಪ್ ಮೂಲಕ ಸಂಪರ್ಕಕ್ಕೆ ಬಂದ ಹುಬ್ಬಳ್ಳಿಯ ಲಾಲ ಬಹಾದ್ದೂರ ನಗರ, ಚೇತನಾ ಕಾಲೊನಿ ಗದಗ ರಸ್ತೆಯ ನಿವಾಸಿ ಇಮ್ರಾನ್ ಫಜಲುಲ್ಲಾ ತಿಲವಳ್ಳಿ ಎನ್ನುವ ಯುವಕ ತಾನು ರೋಜಾ ಉಪವಾಸ ದಲ್ಲಿದ್ದರೂ ಕೂಡ ಅದನ್ನು ಅರ್ಧದಲ್ಲಿ ನಿಲ್ಲಿಸಿ ರಕ್ತದಾನ ಮಾಡಿದ್ದಾರೆ ಎನ್ನಲಾಗಿದೆ. ಇಮ್ರಾನ್ ರ ಈ ನಡೆಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.