ದಿನದ ಸುದ್ದಿ
ಮುಸ್ಲಿಂ ಹೆಸರು ತೆಗೆದು ರಸ್ತೆಗಳಿಗೆ ಮರುನಾಮಕಾರಣ ಮಾಡಲು ಬಿಜೆಪಿ ಮುಖಂಡರ ಅಭಿಯಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೋಮುದಳ್ಳುರಿಗೆ ಬಿಜೆಪಿ ಸರ್ಕಾರ ಸಕಲ ಸಿದ್ಧತೆಯನ್ನು ನಡೆಸಿದಂತಿದೆ ಎಂದು ಜನರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ಪರ ಸಂಘಟನೆಗಳು ಹಿಜಬ್, ಹಲಾಲ್ ಕಟ್, ಜಟ್ಕಾ ಕಟ್, ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಏರಿ ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವದಲ್ಲಿದೆಯಾ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳೇ ಏರಿಯಾ ರಸ್ತೆಗಳಲ್ಲಿನ ಮುಸ್ಲಿಂ ಹೆಸರನ್ನು ತೆಗೆದು ಹಾಕಲು ಅಭಿಯಾನ ಶುರುಮಾಡಿದ್ದಾರೆ.
ನಗರಕ್ಕೆ ಯಾವುದೇ ಕೊಡುಗೆ ನೀಡದ ವ್ಯಕ್ತಿಗಳ ಹೆಸರನ್ನು ಬದಲಾಯಿಸುವಂತೆ ಆಂದೋಲನ ಶುರುವಾಗಿದ್ದು, ಬೆಂಗಳೂರಿನ ರಸ್ತೆಗಳು, ಏರಿಯಾ ಹೆಸರು ಬದಲಾಯಿಸುವಂತೆ ಬಿಜೆಪಿ ಮುಖಂಡರು ಅಭಿಯಾನ ಆರಂಭಿಸಿದ್ದಾರೆ.
ಹಿಂದುಯೇತರ ರಸ್ತೆಗಳು, ಏರಿಯಾಗಳ ಹೆಸರು ಬದಲಾಯಿಸುವಂತೆ ಬಿಬಿಎಂಪಿ ಅಯುಕ್ತರಿಗೆ ಪತ್ರ ಬರೆಯಲಾಗಿದೆ. ನಗರದಲ್ಲಿ ಇರುವ ವಿಕ್ಟೋರಿಯ ರಸ್ತೆ, ಟಿಪ್ಪು ಸುಲ್ತಾನ್ ರಸ್ತೆ, ಟ್ಯಾನಿ ರಸ್ತೆ ಸೇರಿದಂತೆ ಸುಮಾರು 300ರಕ್ಕೂ ಹೆಚ್ಚು ರಸ್ತೆಗಳು ಹಾಗೂ ಬಿಸ್ಮಿಲ್ ನಗರ, ಇಲಿಯಾಸ್ ನಗರ, ಸುಲ್ತಾನ್ ಪಾಳ್ಯ, ಪ್ರೇಜರ್ ಟೌನ್, ಕಾಕ್ಸ್ ಟೌನ ಸೇರಿದಂತೆ ನೂರಾರು ಏರಿಯಾಗಳ ಹೆಸರು ಮರುನಾಮಕಾರಣಕ್ಕೆ ಅಭಿಯಾನ ಆರಂಭವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243