ಲೈಫ್ ಸ್ಟೈಲ್

ಇದು ‘ದಾಡಿ’ ಪುರಾಣ..!

Published

on

ಫೋಟೋ ನೋಡಿ, ಅಯ್ಯೋ ಶಿವನೇ! ಇವರಿಗೆ ಏನು ಬಂತು ದಾಡಿ! ಎನ್ನುತ್ತೀರಾ?  ನಾನು ಈಗ ಹೇಳ ಹೊರಟಿರುವುದು ದಾಡಿ ಸಮಾಚಾರನೇ. ಕೂದಲಿಗೆ ಬಣ್ಣ ಹಚ್ಚುವುದು ಸಾಮಾನ್ಯ.ನೀಲಿ, ಕೆಂಪು, ಹಳದಿ, ಹೀಗೆ ಫಂಕೀ ಹೇರ್ ಕಲರ್ಸ್ ಫ್ಯಾಷನ್ ಲೋಕದಲ್ಲಿ ಮಾಮೂಲಿ. ಮಹಿಳೆಯರ ರೈನ್ ಬೋ ಹೇರ್ ಕಲರಿಂಗ್ ಫ್ಯಾಷನ್ ಬೆನ್ನಲ್ಲೇ, ಪುರುಷರು, ಫ್ಯಾಷನ್ ಫಾಲೋ ಮಾಡೋದ್ರಲ್ಲಿ ನಾವೇನು ಕಮ್ಮಿ ಎಂಬಂತೆ, ಗಡ್ಡ-ಮೀಸೆಗೆ ವೈಬ್ರಂಟ್ ಹೇರ್ ಡೈ ಬಳಸಲು ಶುರು ಹಚ್ಚಿಕೊಂಡಿದ್ದಾರೆ.

ಪಾಶ್ಚಾತ್ಯ ದೇಶಗಳಲ್ಲಿ ಈ ಟ್ರೆಂಡ್ ಸೋಷಿಯಲ್ ಮೀಡಿಯಾದ ಹಾಟ್ ನ್ಯೂಸ್ ಆಗಿದೆ. ರೈನ್ ಬೋ ಮೀಸೆ ಮತ್ತು ರೈನ್ ಬೋ ದಾಡಿ ಈ ಸೀಸನ್ ಗೆ ಮತ್ತಷ್ಟು ಫಂಕೀ ಲುಕ್ ನೀಡುತ್ತಿದೆ. ಇಷ್ಟು ಸಾಲದು ಅಂತ ಗ್ಲಿಟರ್ ಬಿಯರ್ಡ್, ಎಲ್.ಈ.ಡಿ ದಾಡಿ ಗಳು ಇಂಸ್ಟಾಗ್ರಾಂ ಮತ್ತು ಟ್ವಿಟ್ಟರ್ ಗಳಲ್ಲಿ ಹರಿದಾಡುತ್ತಿದೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version