ದಿನದ ಸುದ್ದಿ
ಕೇಂದ್ರ ಸರ್ಕಾರದ ಮಾದರಿಯಲ್ಲಿ MyGov ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ
ಸುದ್ದಿದಿನ ಡೆಸ್ಕ್ : MyGov ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ಜುಲೈ 26ರಂದು ಪ್ರಾರಂಭಿಸಿದರು. ಇದು 2ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರೊಂದಿಗೆ ಅತ್ಯಂತ ಯಶಸ್ವಿ ವೇದಿಕೆಯಾಗಿದೆ. ಹಲವಾರು ರಾಜ್ಯಗಳು ನಿದರ್ಶನಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ MyGov ಕರ್ನಾಟಕ ಪ್ರಾರಂಭಿಸಲಾಗುತ್ತಿದೆ.
ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಮಯೋಚಿತ ಮತ್ತು ಅಧಿಕೃತ ಮಾಹಿತಿಯ ಪ್ರಸಾರವು MyGov ಕರ್ನಾಟಕದ ಪ್ರಮುಖ ಉದ್ದೇಶವಾಗಿದೆ. ಸರ್ಕಾರದೊಂದಿಗೆ ಅಭಿಪ್ರಾಯಗಳು, ಆಲೋಚನೆಗಳು, ಸಲಹೆಗಳನ್ನು ಹಂಚಿಕೊಳ್ಳಲು ನಾಗರಿಕರು karnataka.mygov.in ನಲ್ಲಿ ನೋಂದಾಯಿಸಿಕೊಳ್ಳಬಹುದು.
ಮಾಹಿತಿ ತಂತ್ರಜ್ಞಾನ ರಾಜ್ಯವಾಗಿರುವ ಕರ್ನಾಟಕ ಸರ್ಕಾರವು ತನ್ನ ನಾಗರಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ನಿರೀಕ್ಷಿಸುತ್ತಿದೆ. ರಾಷ್ಟ್ರ ನಿರ್ಮಾಣದ ಜೊತೆಗೆ ಸಮಗ್ರ ಸುಸ್ಥಿರ ಬೆಳವಣಿಗೆಯ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ ಈ ಕ್ರಾಂತಿಕಾರಿ ಹೆಜ್ಜೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಸರ್ಕಾರವು ಜನತೆಯನ್ನು ಒತ್ತಾಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243