ದಿನದ ಸುದ್ದಿ
ಮೈಸೂರು, ಚಾಮುಂಡಿ ಬೆಟ್ಟ : ಮಹಿಷಾಸುರ ವಿಗ್ರಹ ಕೆಡವಲು ಪ್ರೊ. ಭಗವಾನ್ ಆಗ್ರಹ ; ಕಾರಣ ಏನು ಗೊತ್ತಾ..?
ಸುದ್ದಿದಿನ,ಮೈಸೂರು :ಚಾಮುಂಡಿ ಬೆಟ್ಟದ ಮೇಲಿರುವ ರಾಕ್ಷಸ ರೂದಪ ಮಹಿಷಾಸುರನ ವಿಗ್ರಹ ಕೆಡವಲು ಪ್ರೊ.ಭಗವಾನ್ ಆಗ್ರಹಿಸಿದರು.
ಮಹಿಷಾಸುರ ರಾಕ್ಷಸ ಅಲ್ಲ ಅವನು ರಾಕ್ಷನಾಗಿದ್ದರೆ ಮಹಿಷಾಸುರನ ಹೆಸರು ಮೈಸೂರಿಗೆ ಏಕೆ ಇಟ್ಟರು. ಮಹಿಷಾ ಸರ್ವಜನಾಂಗದ ಹೇಳಿಗೆಗಾಗಿ ಇದ್ದ ಬುದ್ಧನ ಮಹಾನ್ ಅನುಯಾಯಿ ಅಂತ ಭಾವಿಸಬೇಕು. ನಮ್ಮ ಜನ ಓದಬೇಕು ಇತಿಹಾಸ ತಿಳಿದುಕೊಳ್ಳಬೇಕು ಹೊಸ ಸಂಗತಿಗಳನ್ನ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಪುರೋಹಿತಷಾಹಿಗಳ ಮಾತು ಕೇಳಿ
1950 ರಲ್ಲಿ ಜಯಚಾಮರಾಜ ಒಡೆಯರ್ ರಾಕ್ಷಸ ರೂಪದ ಮಹಿಷನ ವಿಗ್ರಹ ನಿರ್ಮಾಣ ಮಾಡಿದ್ರು. ಕೂಡಲೇ ಆ ವಿಗ್ರಹವನ್ನ ತೆಗೆದು ಭೌಧ ಬಿಕ್ಕು ಮಹಿಷಾನ ವಿಗ್ರಹ ಸ್ಥಾಪನೆ ಮಾಡಲು ಒತ್ತಾಯಿಸುತ್ತಾ ಇದ್ದೀವಿ.
ರಾಕ್ಷಸ ರೂಪದ ಮಹಿಷನ ಪ್ರತಿಮೆ ಕೆಡವಬೇಕು.
ಅದೇ ಸ್ಥಳದಲ್ಲಿ ಬೌದ್ದ ಬಿಕ್ಕುವಿನ ರೂಪದಲ್ಲಿರುವ ಮಹಿಷನ ಪ್ರತಿಮೆ ಸ್ಥಾಪಿಸಬೇಕು. 1950 ರಲ್ಲಿ ಅಂದಿನ ರಾಜರು ಪುರೋಹಿತ ಶಾಹಿಗಳ ಮಾತು ಕೇಳಿ ರಕ್ಕಸ ರೂಪದಲ್ಲಿ ಇರುವ ಮಹಿಷನ ಪ್ರತಿಮೆ ಮಾಡಿದ್ರು ಎಂದು ಕೆ ಎಸ್ ಭಗವಾನ್ ಕಿಡಿಕಾರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401