ರಾಜಕೀಯ
ಮೈಸೂರು ನಗರ ಪಾಲಿಕೆ ಚುನಾವಣೆ | ಯಾವುದೇ ಕಾರಣಕ್ಕೂ ಮೇಯರ್ ಪಟ್ಟ ಬಿಡಲ್ಲ : ಜಿ.ಟಿ.ದೇವೇಗೌಡ
ಸುದ್ದಿದಿನ,ಮೈಸೂರು : ನಗರ ಪಾಲಿಕೆ ಚುನಾವಣೆಗೆ ಕೌಂಟ್ ಡೌನ್ ಶುರುವಾದ ಹಿನ್ನೆಲೆಯಲ್ಲಿ ಸಚಿವ ಜಿಟಿಡಿ ನೇತೃತ್ವದಲ್ಲಿ ಆಕಾಂಕ್ಷಿಗಳ ಮಹತ್ವದ ಸಭೆಸಿದ್ದಾರೆ. ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದು ಮೈಸೂರಿಗೆ ಆಗಮಿಸಿದ್ದಾರೆ. ತಡರಾತ್ರಿ ಸಭೆ ನಡೆಸಿ ಯಾವ ಪಾರ್ಟಿಗೆ ಮೇಯರ್ ಪಟ್ಟ ನಿರ್ಧಾರವಾಗಲಿದ್ದು ಈಗಾಗಲೇ ಮೇಯರ್ ಪಟ್ಟಕ್ಕಾಗಿ ಜಿದ್ದಾಜಿದ್ದಿಯಲ್ಲಿ ಸಿದ್ದು, ಜಿಟಿಡಿ ಇದ್ದಾರೆ.
ಕಾಂಗ್ರೆಸ್ ನಿಂದ ಬೆಂಬಲ ಸಿಗದಿದ್ರೆ ಕಮಲದ ಜೊತೆ ಕೈತೋಡಿಸುತ್ತಾರಾ ದಳಪತಿಗಳು?
ಬಿಜೆಪಿ ಜೊತೆ ಮೈತ್ತಿ ಸುಳಿವು ಕೊಟ್ಟ ಜಿಟಿಡಿ ಅವರು ಕಳೆದ ಐದು ವರ್ಷಗಳಿಂದ ಬಿಜೆಪಿ ಮೈತ್ರಿಯಿಂದ ಅಧಿಕಾರ ನಡೆಸಿದ್ದೇವೆ. ಜೊತೆಗೆ ರಾಜ್ಯದ ಸ್ಥಳೀಯ ಸಂಸ್ಥೆಗಳೊಂದಿಗೆ ಜೊತೆಗಿದ್ದೇವೆ. ಯಾವುದೇ ಕಾರಣಕ್ಕೂ ಮೇಯರ್ ಪಟ್ಟ ಬಿಡಲ್ಲ. ಮತ್ತೊಂದೆಡೆ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ. ಈ ವಿಷಯವನ್ನ ಪಕ್ಷದ ಮುಖಂಡರು ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ.ಸಭೆಗೂ ಮುನ್ನ ಸಚಿವ ಜಿಟಿಡಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401