ದಿನದ ಸುದ್ದಿ
ಮೈಸೂರು ದಸರಾ : ಜಟ್ಟಿಗಳ ವಜ್ರಮುಷ್ಟಿ ಕಾಳಗಕ್ಕೆ ತಯಾರಿ
ಸುದ್ದಿದಿನ, ಮೈಸೂರು : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಜಂಬೂಸವಾರಿ ಮೆರವಣಿಗೆ ದಿನ ಜಟ್ಟಿಗಳ ವಜ್ರಮುಷ್ಠಿ ಕಾಳಗ ಪೂರ್ವ ತಯಾರಿ ನಡೆಸಲಾಗಿದೆ. ವಿಜಯದಶಮಿ ದಿನ ಬೆಳಿಗ್ಗೆ 9:15 ರಿಂದ ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ಆರಂಭವಾಗಲಿದೆ.
ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಸಮ್ಮುಖದಲ್ಲಿ ತೊಡೆ ತಟ್ಟಲಿದ್ದಾರೆ ಜಟ್ಟಿಗಳು. ಆನೆದಂತದಿಂದ ತಯಾರಿಸಿದ ಆಯುಧ ವಜ್ರಮುಷ್ಠಿ ಕೈಗೆ ಧರಿಸಿ ಕಾಳಗ, ತಲೆಯಿಂದ ರಕ್ತ ಕಾರಿದ ನಂತರವೇ ಕಾಳಗ ಸ್ಥಗಿತವಾಗಿತ್ತು. ರಕ್ತ ಬಂದ ಬಳಿಕ ತಾಯಿ ಚಾಮುಂಡೇಶ್ವರಿ ತಾಯಿ ಶಾಂತಾಳಾಗ್ತಾರೆ ಅನ್ನೋ ಸಂಪ್ರದಾಯವಿದೆ.
ನವರಾತ್ರಿ ಕೊನೆಯ ದಿನ ನಡೆಯಲಿರುವ ವಜ್ರಮುಷ್ಠಿಕಾಳಗ ನೋಡಲು ಬೆಂಗಳೂರಿನಿಂದ, ರಾಘವೇಂದ್ರ ಜೆಟ್ಟಿ, ಮೈಸೂರಿನಿಂದ ಮಂಜುನಾಥ್ ಜೆಟ್ಟಿ, ಚಾಮರಾಜನಗರದಿಂದ ಪುರುಷೋತ್ತಮ ಜೆಟ್ಟಿ ಹಾಗೂ ಚನ್ನಪಟ್ಟಣದಿಂದ ವಿದ್ಯಾಧರ ಜೆಟ್ಟಿ ಕಾಳಗಕ್ಕೆ ಸಜ್ಜಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401