ದಿನದ ಸುದ್ದಿ
ವರ್ಚುವಲ್ ವೇದಿಕೆಯಲ್ಲಿ ದಸರಾ ವೀಕ್ಷಿಸಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ
ಸುದ್ದಿದಿನ,ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಆಚರಣೆಯನ್ನು ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್ ಆಗಿ ಆಚರಿಸಲಾಗುತ್ತಿದ್ದು, ಚಾಮುಂಡಿಬೆಟ್ಟ ಹಾಗೂ ಅರಮನೆ ಆವರಣದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ವೆಬ್‌ಸೈಟ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ನೇರಪ್ರಸಾರ (ಲೈವ್ ಸ್ಟ್ರೀಮಿಂಗ್) ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ದಿನಾಂಕ: 17-10-2020 ರಂದು ಬೆಳಗ್ಗೆ 7:45 ರಿಂದ ಬೆಳಗ್ಗೆ 8:15 ರ ವರೆಗೆ ನಡೆಯುವ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ಆವರಣದಲ್ಲಿ ದಿನಾಂಕ 17-10-2020ರಿಂದ 24-10-2020 ರವರೆಗೆ ಪ್ರತಿ ದಿನ ಸಂಜೆ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ಜಿಲ್ಲಾಡಳಿತದ ವೆಬ್‌ಸೈಟ್ ಹಾಗೂ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್‌ಬುಕ್ ಪೇಜ್, ಮತ್ತು ಯೂಟ್ಯೂಬ್ ನಲ್ಲಿ ನೇರಪ್ರಸಾರ ವೀಕ್ಷಿಸಲು ಕೋರಿದೆ.
ದಸರಾ ಮಹೋತ್ಸವದ ಕೊನೆಯ ದಿನವಾದ ದಿನಾಂಕ 26-10-2020 ರಂದು ನಡೆಯುವ ಜಂಬೂಸವಾರಿ ಕಾರ್ಯಕ್ರಮವನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತಿದ್ದು, ಏಕ ಕಾಲದಲ್ಲಿ ಇತರೆ ಖಾಸಗಿ ವಾಹಿನಿಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೇರಪ್ರಸಾರ ವಾಗಲಿದೆ.
ದಸರಾ ಕಾರ್ಯಕ್ರಮಗಳು ನಡೆಯುವ ಸಮಯವನ್ನು ವೆಬ್‌ಸೈಟ್ https://mysore.nic.in ನಲ್ಲಿ ಪ್ರಕಟಿಸಲಾಗಿದೆ.
ನೇರಪ್ರಸಾರವನ್ನು (live streaming) ವೆಬ್‌ಸೈಟ್ ವಿಳಾಸ https://mysore.nic.in ಹಾಗೂ ಫೇಸ್‌ಬುಕ್ ಪೇಜ್
https://www.facebook.com/mysorevarthe/ ಹಾಗೂ ಯೂಟ್ಯೂಬ್ ಲಿಂಕ್
https://youtu.be/HhfbR9FMO8E ಮೂಲಕ ವೀಕ್ಷಿಸಬಹುದು.
ಸಾರ್ವಜನಿಕರು ಮನೆಯಲ್ಲೇ ಕುಳಿತು ವರ್ಚುಯಲ್ ವೇದಿಕೆಯ ಮೂಲಕ ವೀಕ್ಷಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243