ದಿನದ ಸುದ್ದಿ

ಮೈಸೂರು ಭಾಗದ ಜನಪದರು ಹೇಳುವಂತೆ ‘ನವರಾತ್ರಿ ಆಯುಧ ಪೂಜೆ ದಸರಾ ಗುಪ್ತ ಹಿನ್ನಲೆ’..!

Published

on

  • ಹ.ರಾ.ಮಹಿಶ

ರ್ಯ ವೈದಿಕ ಬ್ರಾಹ್ಮಣ ಪುರುಷರು ನಡೆಸುತ್ತಿದ್ದ “ಗೋಯಜ್ಞ”ಗಳಿಂದ ಬೇಸಾಯ ಯೋಗ್ಯವಾಗಿರುತ್ತಿದ್ದ ಸಾವಿರಾರು ಗೋವುಗಳು ನಿತ್ಯವೂ ಬಲಿಯಾಗುತ್ತಿದ್ದವು..! ಎಷ್ಟೆಂದರೆ ಬರುಬರುತ್ತಾ ಹೊಲಗದ್ದೆಗಳಲ್ಲಿ ಒಕ್ಕಲುತನ ಮಾಡುವ ಒಕ್ಕಲಿಗ ರೈತರಿಗೆ ಉಳಲು ಬಿತ್ತಲು ಮತ್ತು ಗಾಡಿಗೆ ಕಟ್ಟಲು ದನಗಳೇ ಸಿಗದಷ್ಟು ಗೋವುಗಳನ್ನು ಯಜ್ಞದ ಹೆಸರಿನಲ್ಲಿ ತಿಂದುಹಾಕುತ್ತಿದ್ದರು..! ಒಕ್ಕಲಿಗರು ತಮ್ಮ ರಾಜನಾದ ಮಹಿಶನಿಗೆ ಈ ಕುರಿತು ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ರೈತಪರನಾದ ಮಹಿಶಮಹಾರಾಜರು ಪ್ರಾಣಿಗಳ ಮಾರಣಹೋಮವಾಗುತ್ತಿದ್ದ ಯಜ್ಞಯಾಗಗಳನ್ನು ನಿಷೇಧಿಸಿದರು. ಮತ್ತು ಬ್ರಾಹ್ಮಣಪುರುಷರು ಹೊಟ್ಟೆಪಾಡಿಗಾಗಿ ಬೇರೇನಾದರೂ ನ್ಯಾಯಯುತವಾದ ಮಾರ್ಗದಿಂದ ದುಡಿದು ತಿನ್ನುವಂತೆ ಅಪ್ಪಣೆ ಹೊರಡಿಸಿದರು. ನಾಡಿನರೈತರು ಸಮಾಧಾಮದಿಂದ ನಿಟ್ಟುಸಿರು ಬಿಟ್ಟರು..!

ಮುಗ್ಧಜನರ ಮೆದುಳಿಗೆ ಮೌಢ್ಯ ತುಂಬಿ ತೊಟ್ಟು ಬೆವರುಸುರಿಸದೆ ನಿರಾಯಾಸವಾಗಿ ಬದುಕಿಕೊಂಡಿದ್ದ ಆರ್ಯವೈದಿಕ ಬ್ರಾಹ್ಮಣ ಪುರುಷರು ಇದರಿಂದ ಕುದಿಕುದಿದುಕುಪಿತಗೊಂಡರು..! ತಮ್ಮ ಹೊಟ್ಟೆಯ ಮೇಲೆ ಹೊಡೆದ ಮಹಿಶಾಸುರ ಮಹಾರಾಜನನ್ನು ಕೊಲ್ಲಲು ತೀರ್ಮಾನಿಸಿದರು..! ಸ್ವತಃ ಮಹಾಶೂರಧೀರ ಮಹಾಧೈತ್ಯದಾನವನಾದ ಮತ್ತು ಸದಾ ಅಂಗರಕ್ಷಕರೊಂದಿಗಿರುವ ಮಹಾರಾಜರನ್ನು ಕೊಲ್ಲುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಅಗ್ರಹಾರದೊಳಗೆ ಒಂಭತ್ತು ರಾತ್ರಿಗಳು ರಾಜನನ್ನು ಶಕ್ತಿಯಿಂದಲ್ಲದೆ ಯುಕ್ತಿಯಿಂದ ಕೊಲ್ಲುವುದು ಹೇಗೆಂದು ಗುಪ್ತಸಭೆ ಚರ್ಚೆಗಳು ನಡೆದವು ಅದರ ನೆನಪಿಗೇ ಇಂದು ನವರಾತ್ರಿ(ಒಂಭತ್ತು ರಾತ್ರಿ) ಆಚರಣೆ..!!

ಮಹಿಶಾಸುರನ ಕುಟುಂಬಕ್ಕೆ ನಂಬುಗೆಯ ಆಪ್ತಳಾಗಿದ್ದ ಚಾಮುಂಡಿ ಎಂಬ ಮಹಿಳೆಯಿಂದ‌ ಅಂಗರಕ್ಷರಿಲ್ಲದ ಬೆಳಗಿನ ಸೂರ್ಯನಮಸ್ಕಾರದ ವೇಳೆ ಹಾಲಿಗೆ ಮತ್ತು ಬರುವ ವಿಷಬೆರೆಸಿ ಕುಡಿಸುವಂತೆಯೂ‌ ಹಿಂದಿನರಾತ್ರಿಯೇ ನದೀತೀರದಲ್ಲಿ‌ ಕತ್ತಲಿನಲ್ಲಿ ಸುತ್ತಲೂ ಬಗೆಬಗೆ ಆಯುಧಸಮೇತ ಅವಿತು ಕೂತು ಮೂರ್ಛೆಗೊಂಡ ಮಹಿಷನನ್ನು ಕೊಚ್ಚಿ ಕೊಲ್ಲುವಂತೆಯೂ ಈ ಮಹಾಕಾರ್ಯಕ್ಕಾಗಿ ಚಾಮುಂಡಿಯನ್ನು ದೇವತೆಯಂತೆ ಬಿಂಬಿಸಿ ರಾಣಿಯಾಗಿ ಮಾಡುವುದಾಗಿಯೂ ಗುಪ್ತ ಒಪ್ಪಂದವಾಯಿತು..! ಹಾಗಾಗಿ ಆ ಹಿಂದಿನ ರಾತ್ರಿಯೇ ಅಗ್ರಹಾರದಲ್ಲಿದ್ದ ಬ್ರಾಹ್ಮಣರ ಮನೆಯ ಆಯುಧಗಳು ಮಹಿಶಾಸುರನನ್ನು ಕೊಲ್ಲಲು ಪೂರಕವಾಗಿ ಪೂಜೆಗೊಳಗಾದವು..! ಅದರ ನೆನಪಿಗೇ “ಆಯುಧಪೂಜೆ” ಆಚರಣೆ..!!

ಬ್ರಾಹ್ಮಣರ ಮತ್ತು ಚಾಮುಂಡಿ ನಡುವಿನ ಗುಪ್ತಯೋಜನೆಯಂತೆ ಮರುದಿನ ಮುಂಜಾನೆಯೇ ಮಹಿಷಾಸುರಮಹಾರಾಜರನ್ನು ಮೋಸದಿಂದ ಕ್ರೂರವಾಗಿ ಕೊಲ್ಲಲಾಯಿತು..! ರೈತರು ಜನಸಾಮಾನ್ಯ ಪ್ರಜೆಗಳು ತಮ್ಮ ಪ್ರಜಾಪಿತರಾಜರನ್ನು ಕಳೆದುಕೊಂಡು ಅನಾಥರಾದರು..!
ಬ್ರಾಹ್ಮಣರು ವಿಜಯ ಸಾಧಿಸಿದರು. ಆ ಹತ್ತನೇ(ದಶ)ದಿನದ ವಿಜಯ ನೆನಪೇ ಮೈಸೂರು ‘ದಸ’ರಾ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version