ದಿನದ ಸುದ್ದಿ
ಮೈಸೂರು ದಸರಾ | ಓಟದ ಸ್ಪರ್ಧೆಯಲ್ಲಿ ಎಡವಿ ಬಿದ್ರು ಸಚಿವ ಜಿ.ಟಿ.ದೇವೇಗೌಡ..!
ಸುದ್ದಿದಿನ,ಮೈಸೂರು: ಓಟದ ಸ್ಪರ್ಧೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಎಡವಿ ಬಿದ್ದಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆ ವೇಳೆ ಈ ಘಟನೆ ನಡೆದಿದೆ. ದಸರಾ ಓಟದ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯರ 2 ಕಿ.ಮಿ ದೂರದ ಓಟದ ಸ್ಪರ್ಧೆಯಲ್ಲಿ ಭಾಗಿಯಾದರು. ಪಂಚೆ ಎತ್ತಿಕಟ್ಟಿ ಓಟದಲ್ಲಿ ಭಾಗಿಯಾಗಿದ್ದ ಜಿ.ಟಿ.ಡಿ, ಓಡುವ ಬರದಲ್ಲಿ ಮುಂಗಾತವಾಗಿ ಬಿದ್ದರು. ಈ ವೇಳೆ ಸ್ಥಳದಲ್ಲಿದ್ದವರ ನೆರವಿನಿಂದ ಜಿಟಿಡಿ ಮತ್ತೆ ಮೇಲೆದ್ದು ಓಟ ಮುಂದುವರೆಸಿದ್ರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401