ದಿನದ ಸುದ್ದಿ

ಮೈಸೂರು ದಸರಾ : ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿದ ಎಚ್.ಡಿ.ಕೆ

Published

on

ಸುದ್ದಿದಿನ ಡೆಸ್ಕ್ : ಇಂದು ಮೈಸೂರು ದಸರಾ ಉತ್ಸವದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ ಜಂಬೂ ಸವಾರಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಕೋಟೆ ಅಂಜನೇಯ ಸ್ವಾಮಿ‌ ದೇವಸ್ಥಾನದ ಮುಂದೆ ನೇರವೇರಿಸಿದ ಸಿಎಂ ತೆರದ ವಾಹನದಲ್ಲಿ‌ ಕೈ ಬೀಸಿ ಪುಷ್ಪಾರ್ಚನೆ ಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸಿಎಂಗೆ ಡಿಸಿಎಂ ಪರಮೇಶ್ಚರ , ಉಸ್ತುವಾರಿ ಸಚಿವ ಜಿ.ಟಿ‌ ದೇವೇಗೌಡ, ಸಚಿವರಾದ ಸಾ.ರಾ ಮಹೇಶ್. ಸಾಥ್ ನೀಡಿದರು.

ನಂತರ ಅಂಬಾರಿಗೆ ಪುಷ್ಪಾರ್ಚನೆ ಮಾಡಿದರು ಸಿಎಂ ಹೆಚ್ಡಿಕೆ, ಹಾಗೂ ಸಚಿವರು, ಗಣ್ಯರು. ಚಾಮುಂಡೇಶ್ವರಿ ಉತ್ಸವ ಮೂರ್ತಿ ಜೊತೆ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅರ್ಜುನನಿಗೆ, ಗಣ್ಯರಿಗೆ ಗಜವಂದನೆ ಸಲ್ಲಿಸಿತು ಗಜಪಡೆ. ಚಿನ್ನದ ಅಂಬಾರಿ ಹೊತ್ತು ರಾಜ ಮಾರ್ಗದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ್ದ ಕ್ಯಾಪ್ಟನ್ ಅರ್ಜುನ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version