ದಿನದ ಸುದ್ದಿ
ದಸರಾ ಆನೆಗಳ ತೂಕ ಪರಿಶೀಲನೆ
ಸುದ್ದಿದಿನ ಡೆಸ್ಕ್: ಮೈಸೂರು ದಸರಾ ಉತ್ಸವದ ಅಂಬಾರಿ ಹೊರುವ ಎರಡನೇ ತಂಡದಲ್ಲಿ ಇರುವ ಆನೆಗಳ ಆರೋಗ್ಯ ತಪಾಸಣೆ ನಡೆಸಿದ್ದು, ಆನೆಗಳು ಸ್ಥಿರ ತೂಕ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ತಂಡದಲ್ಲಿ ಇರುವ ಅಭಿಮನ್ಯು ಅತ್ಯಧಿಕ ತೂಕ ಹಾಗೂ ವಿಜಯ ಅತೀ ಕಡಿಮೆ ತೂಕ ಹೊಂದಿವೆ.
ಅಭಿಮನ್ಯು 4930 ಕೆಜಿ, ಬಲರಾಮ 4910 ಕೆಜಿ, ದ್ರೋಣ 3900 ಕೆಜಿ, ಕಾವೇರಿ 2830 ಕೆಜಿ, ವಿಜಯ 2790 ಕೆಜಿ, ಪ್ರಶಾಂತ 4650 ಕೆಜಿ ತೂಕ ಹೊಂದಿವೆ. ಅಂಬಾರಿ ಆನೆಗಳ ಆರೋಗ್ಯ ಕೂಡ ಉತ್ತಮ ಸ್ಥಿತಿಯಲ್ಲಿದೆ. ಈಗಾಗಲೇ ಮೈಸೂರಿನಲ್ಲಿ ಅಂಬಾರಿ ಆನೆಗಳ ತಾಲೀಮು ನಡೆಯುತ್ತಿದೆ.