ದಿನದ ಸುದ್ದಿ
ಮೈಸೂರು ದಸರಾ | ಸೆ.23 ಕ್ಕೆ ಹೈಫಾ ಶತಮಾನೋತ್ಸವ ಸಂಭ್ರಮ : ಒಡೆಯರ್
ಸುದ್ದಿದಿನ ಡೆಸ್ಕ್ : ಇದೇ 23ರಂದು ಹೈಫಾ ಶತಮಾನೋತ್ಸವ ಸಂಭ್ರಮ ನಡೆಯಲಿದ್ದು, ಇದು ಇಸ್ರೇಲ್ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ನೆನಪಿನ ಸಮಾರಂಭವಾಗಿದೆ ಎಂದು ಮೈಸೂರಲ್ಲಿ ಯದುವೀರ್ ಶ್ರೀಕಂಠದತ್ತ ಒಡೆಯರ್ ಹೇಳಿದರು.
ಇಸ್ರೇಲ್ ರಾಷ್ಟ್ರಕ್ಕಾಗಿ ಹೈಫಾದಲ್ಲಿ ನಡೆದಿದ್ದ ಯುದ್ಧವು 1918ರಲ್ಲಿ ನಡೆಯಿತು, ಯುದ್ಧದಲ್ಲಿ ಮೈಸೂರು, ಜೋಧ್ ಪುರ್ ಸೈನಿಕರು ಜಂಟಿಯಾಗಿ ಭಾಗವಹಿಸಿದ್ದರು. ಈ ನೆನಪಿಗೆ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುವ ಸಮಾರಂಭ ನಡೆಸಲಾಗುವುದು.
ಮೈಸೂರಿನಲ್ಲಿ ಹೈಫಾ ಮೆಮೋರಿಯಲ್ ಸ್ಥಾಪನೆಗೆ ನಿರ್ಧರಿಸಲಾಗಿದ್ದು, ಹೈಫಾ ವಿಜಯೋತ್ಸವದ ಅಂಗವಾಗಿ ಸಮಾರಂಭ ಏರ್ಪಡಿಸಲಾಗಿದೆ. ಮೈಸೂರು ಮೂಲದ ಅರಸು ಕುಟುಂಬದವರು ಈ ಯುದ್ಧದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಯುದ್ಧದಲ್ಲಿ ಭಾಗವಹಿಸಿದ್ದ 5 ಕುಟುಂಬಗಳಿಗೆ ಗೌರವ ಸೂಚಿಸಲಾಗುವುದು. ಡೆಲ್ಲಿ, ಬೆಂಗಳೂರಲ್ಲಿ ಈಗಾಗಲೇ ಸ್ಮಾರಕ ಇದೆ. ಮೈಸೂರಲ್ಲೂ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗುವುದು. ಸರ್ಕಾರದ ಸಹಭಾಗಿತ್ವದಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಸಮಾರಂಭದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401