ದಿನದ ಸುದ್ದಿ

ಮೈಸೂರು ದಸರಾ : ಮೊದಲ ಟ್ರಯಥ್ಲಾನ್ ಗೆ ಚಾಲನೆ..!

Published

on

ಸುದ್ದಿದಿನ, ಮೈಸೂರು : 2018ರ ವಿಶ್ವವಿಖ್ಯಾತ ದಸರಾ ಮಹೋತ್ಸವ ಗರಿಗೆದರಿದ್ದಾವೆ ಕ್ರೀಡಾ ಚಟುವಟಿಕೆಗಳು. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಟ್ರಯಥ್ಲಾನ್ ಆಯೋಜನೆ ಮಾಡಲಾಗಿದೆ. ಈಜು, ಸೈಕ್ಲಿಂಗ್, ಓಟ ಒಳಗೊಂಡಿಗೆ ಟ್ರಯಥ್ಲಾನ್.ಸರಸ್ವತಿಪುರಂ ಈಜುಕೊಳ ಸಮೀಪ ಟ್ರಯಥ್ಲಾನ್‌ಗೆ ಚಾಲನೆ ನೀಡಲಾಯಿತು.

ಸೂಪರ್ ಸ್ಪ್ರಿಂಟ್, ಸ್ಪ್ರಿಂಟ್ ವಿಭಾಗಗಳಲ್ಲಿ ನಡೆಯುತ್ತಿರುವ ಟ್ರಯಥ್ಲಾನ್‌ ನಲ್ಲಿ 400 ಮೀ. ಈಜು, 10 ಕಿ.ಮೀ. ಸೈಕ್ಲಿಂಗ್, 2.5 ಕಿ.ಮೀ. ಓಟ ಒಳಗೊಂಡ ಸೂಪರ್ ಸ್ಪ್ರಿಂಟ್ ವಿಭಾಗಗಳಿವೆ. 750 ಮೀ. ಈಜು, 20 ಕಿ.ಮೀ. ಸೈಕ್ಲಿಂಗ್, 5 ಕಿ.ಮೀ. ಓಟ ಒಳಗೊಂಡ ಸ್ಪ್ರಿಂಟ್ ವಿಭಾಗವಿದೆ. ಟ್ರಯಥ್ಲಾನ್‌ನಲ್ಲಿ ಒಟ್ಟು 98 ಸ್ಪರ್ಧಿಗಳಿದ್ದು, ಶಾಲಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲ ವಯೋಮಾನದವರೂ ಭಾಗಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version